
Ujire: ರಾಜ್ಯಸಭಾ ನಿಧಿಯಿಂದ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್
Thursday, July 24, 2025
ಲೋಕಬಂಧು ನ್ಯೂಸ್, ಉಜಿರೆ
ರಾಜ್ಯಸಭಾ ಸದಸ್ಯ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಮ್ಮ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಂಜೂರಾಗಿದ್ದು,
ತಲಾ 1.46 ಲಕ್ಷ ರೂ.ನಂತೆ 1.46 ಕೋಟಿ ಮಂಜೂರಾಗಿರುವುದಾಗಿ ರಾಜ್ಯಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಜನಾರ್ದನ್ ಕೆ.ಎನ್. ತಿಳಿಸಿದ್ದಾರೆ.
ಮಕ್ಕಳ ಶಿಕ್ಷಣ ಬೆಳವಣಿಗೆಗೆ ಆಧುನಿಕ ತಂತ್ರಜ್ಞಾನ ಬಳಸಿ ಶಿಕ್ಷಣ ನೀಡುವ ಉದ್ದೇಶದಿಂದ ಡಾ ಹೆಗ್ಗಡೆಯವರು ಇದನ್ನು ಮಂಜೂರು ಗೊಳಿಸಿದ್ದಾರೆ.