Belthangadi: ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ತಪ್ಪೊಪ್ಪಿಕೊಂಡ ಸುಜಾತ ಭಟ್!
Saturday, August 30, 2025
ಲೋಕಬಂಧು ನ್ಯೂಸ್, ಬೆಳ್ತಂಗಡಿ
ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಆ.29ರಂದು 4ನೇ ದಿನ ಸುಜಾತ ಭಟ್ ಅವರನ್ನು ವಿಚಾರಣೆ ನಡೆಸಿದ್ದು, ಆರೋಪ ಮಾಡಿದ ಎಲ್ಲವೂ ಸುಳ್ಳು ಎಂದು ಒಪ್ಪಿಕೊಂಡಿದ್ದು ಅದನ್ನು ಅಧಿಕಾರಿಗಳು ವೀಡಿಯೊ ದಾಖಲು ಮಾಡಿಕೊಂಡಿದ್ದಾರೆ.ಸುಜಾತ ಭಟ್ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಟಿಷನ್ ಮಾತ್ರ ಅಗಿದ್ದು ಮತ್ತು ವೃದ್ಧೆಯಾಗಿರುವ ಕಾರಣ ಸುಜಾತ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಪ್ರಕರಣದ ತನಿಖೆ ಮಾಡಿರುವ ಎಸ್.ಐ.ಟಿ ಅಧಿಕಾರಿಗಳು ಆಕೆಗೆ ಬಿಗ್ ರಿಲೀಫ್ ನೀಡಿದ್ದಾರೆ.
ಎಸ್.ಐ.ಟಿ ಅಧಿಕಾರಿಗಳು ಕರೆದಾಗ ಬರುವಂತೆ ಸುಜಾತ ಭಟ್'ಗೆ ಸೂಚನೆ ನೀಡಿ ವಾಪಸ್ ಬೆಂಗಳೂರಿನ ಅವರ ಮನೆಗೆ ಕಳುಹಿಸಿದ್ದಾರೆ.