-->
Kundapura: ಕೋಟೇಶ್ವರ ಹಳೆಅಳಿವೆಯಲ್ಲಿ 'ಗಣೇಶ ಉದ್ಭವ'

Kundapura: ಕೋಟೇಶ್ವರ ಹಳೆಅಳಿವೆಯಲ್ಲಿ 'ಗಣೇಶ ಉದ್ಭವ'

ಲೋಕಬಂಧು ನ್ಯೂಸ್, ಕುಂದಾಪುರ
ಇಲ್ಲಿನ ಕೋಟೇಶ್ವರ ಅಳಿವೆಬಾಗಿಲು ಕಡಲ ತೀರದಲ್ಲಿ ಗಣೇಶ ಉದ್ಭವಗೊಂಡಿದ್ದಾನೆ!
ಹೌದು, ಭಾದ್ರಪದ ಶುಕ್ಲ ಚೌತಿಯಂದು ಲೋಕದೆಲ್ಲೆಡೆ ಸಂಭ್ರಮ, ಸಡಗರದಿಂದ ಪೂಜಿಸಲ್ಪಡುವ‌ ಮಹಾಗಣಪತಿ ಶಿವಲಿಂಗಕ್ಕೆ ಪುಷ್ಪಾರ್ಚನೆ‌ ಮಾಡುವ ದೃಶ್ಯವನ್ನು, ನಾಡಿನ ಸಮಸ್ತ ಜನತೆಗೆ ಶುಭಾಶಯ ಸಾರುವ 4 ಅಡಿ ಮತ್ತು 6 ಅಡಿ ಎತ್ತರ, ಅಗಲವುಳ್ಳ ಕಲಾಕೃತಿಯನ್ನು ಗಣೇಶ ಚತುರ್ಥಿ ಅಂಗವಾಗಿ ಹಳೆಅಳಿವೆ ಕಡಲ ತೀರದಲ್ಲಿ ‘ಜೈ ಗಣೇಶ’  ಶೀರ್ಷಿಕೆಯೊಂದಿಗೆ ಆಕರ್ಷಕವಾಗಿ ಮೂಡಿಬಂದಿದೆ.


ಉಡುಪಿ ಸ್ಯಾಂಡ್ ಥೀಮ್ ತಂಡದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ರಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article