
Udupi: ಆ.2: ' ಶ್ರೀಗೋವಿಂದ ನಮನ 90'
Friday, August 1, 2025
ಲೋಕಬಂಧು ನ್ಯೂಸ್, ಉಡುಪಿ
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ 90ರ ಸ್ಮರಣೆ ಅಂಗವಾಗಿ ಶ್ರೀಗೋವಿಂದ ನಮನ 90 ಕಾರ್ಯಕ್ರಮ ಆಗಸ್ಟ್ 2ರಂದು ಸಂಜೆ 4.30ರಿಂದ ರಾತ್ರಿ 7 ಗಂಟೆ ವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು.
ಬನ್ನಂಜೆ ಕೈಪಿಡಿ ಅನಾವರಣ ಮಾಡಲಾಗುವುದು.
ರಘುರಾಮ ಆಚಾರ್, ಡಾ.ದಂಡತೀರ್ಥ ಸೀತಾರಾಮ ಭಟ್, ಡಾ.ಉಷಾ ಚಡಗ ಅತಿಥಿಗಳಾಗಿದ್ದಾರೆ.
ಹರಿದಾಸ ಚಂದ್ರಿಕಾ ಮತ್ತು ಓ.ಆರ್.ಪಿ. ಅಮೆರಿಕ ಆಯೋಜಿತ ಉಷಾಹರಣ ಕಾವ್ಯ ವಿಮರ್ಶೆಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.