-->
Shiru Mutt ಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ

Shiru Mutt ಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ

ಲೋಕಬಂಧು ನ್ಯೂಸ್, ಉಡುಪಿ
ಲೋಕಗುರು ಶ್ರೀ ಮಧ್ವಾಚಾರ್ಯ ಕರಾರ್ಚಿತ ಉಡುಪಿ ಶ್ರೀಕೃಷ್ಣ ದೇವರು, ಶ್ರೀ ವಾದಿರಾಜ ಗುರುಸಾರ್ವಭೌಮ ಪ್ರತಿಷ್ಠಾಪಿತ ಶ್ರೀ ಮುಖ್ಯಪ್ರಾಣ ದೇವರಿಗೆ 47 ವರ್ಷ ಕಾಲ ವಿಧಿವತ್ತಾಗಿ ಪೂಜೆ ಸಲ್ಲಿಸಿ, ಪೊಡವಿಗೊಡೆಯನಿಗೆ ನಿರಂತರ‌ 300 ವೈವಿಧ್ಯಮಯ ಅಲಂಕಾರ ಸೇವೆಯ ಮೂಲಕ ವೈಭವದ 3 ಪರ್ಯಾಯವನ್ನು ಭಗವಂತನ ಪಾದಕಮಲಗಳಿಗೆ ಸಮರ್ಪಿಸಿದ ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 7ನೇ ವರ್ಷದ ಆರಾಧನೆ ಶ್ರಾವಣ ಶುದ್ಧ ಸಪ್ತಮೀ ಗುರುವಾರ ಜುಲೈ 31ರಂದು ಇಲ್ಲಿನ ರಥಬೀದಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ವಿಧಿವತ್ತಾಗಿ ವೈಭವದಿಂದ ನೆರವೇರಿತು.ಪ್ರಾತಃಕಾಲ 6.30ರಿಂದ ಶ್ರೀ ರಾಘವೇಂದ್ರ ಮಠದಲ್ಲಿ ರಾಯರ ವೃಂದಾವನದ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ನಡೆಯಿತು.


ಬಳಿಕ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರ ಮೃತ್ತಿಕಾ ವೃಂದಾವನಕ್ಕೆ ಪಿ.ಲಾತವ್ಯ ಆಚಾರ್ಯ ಕಲಶಾಭಿಷೇಕ ಸಲ್ಲಿಸಿದರು. ಕೆಮುಂಡೇಲು ಸುಬ್ರಹ್ಮಣ್ಯ ಭಟ್ ಹಾಗೂ ಗಣೇಶ ಭಟ್ ಧಾರ್ಮಿಕ ಪ್ರಕ್ರಿಯೆ ಶಾಸ್ತ್ರೋಕ್ತವಾಗಿ ನಡೆಸಿದರು. ಬಳಿಕ ಅನ್ನ ಸಂತರ್ಪಣೆ ನಡೆಸಲಾಯಿತು.


ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಬಂಧುಗಳು ನೆರವೇರಿಸಿದ ಈ ಆರಾಧನಾ ಮಹೋತ್ಸವದಲ್ಲಿ ಉಡುಪಿ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ಜಯತೀರ್ಥ ಆಚಾರ್ಯ, ಅಪ್ಪಣ್ಣ ಆಚಾರ್ಯ, ವಾಸುದೇವ ಆಚಾರ್ಯ, ಪೂರ್ವಾಶ್ರಮದ ಕುಟುಂಬಿಕರಾದ ಅನಂತ ತಂತ್ರಿ, ಲಕ್ಷ್ಮೀನಾರಾಯಣ ತಂತ್ರಿ, ಪ್ರಹ್ಲಾದ ಆಚಾರ್ಯ ಸೊಂಡೂರು, ರಾಜಗೋಪಾಲ್, ಡಾ.ವ್ಯಾಸರಾಜ ತಂತ್ರಿ, ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ.ವೃಜನಾಥ ಆಚಾರ್ಯ, ನಾಗೇಶ ಆಚಾರ್ಯ, ಮಹೇಶ ಆಚಾರ್ಯ, ರಾಜೇಂದ್ರ, ಮೋಹನದಾಸ ಭಟ್, ಜಯರಾಮ ರಾವ್, ಅನಂತ ಉಪಾಧ್ಯ ಸಾಂತ್ಯಾರು, ರಾಜೇಂದ್ರ ಆಚಾರ್ಯ ಬಡಗುಬೆಟ್ಟು, ಶಂಕರನಾರಾಯಣ ಹೊಳ್ಳ, ಅರ್ಜುನ್ ಆಚಾರ್ಯ, ಅಕ್ಷೋಭ್ಯ ಆಚಾರ್ಯ, ವಿಶಾಲ್ ಆಚಾರ್ಯ ಮೊದಲಾದವರಿದ್ದರು.


ಕೇಮಾರು ಮಠದಲ್ಲಿ
ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಕೇಮಾರು ಮಠದಲ್ಲಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನಾ ಉತ್ಸವ ನಿಮಿತ್ತ ವಿಶೇಷ ಪೂಜೆ ನೆರವೇರಿಸಿ, ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

Ads on article

Advertise in articles 1

advertising articles 2

Advertise under the article