-->
Udupi: ಆ.25-ಸೆ.7: ವೈಭವದ ಕನ್ನರ್ಪಾಡಿ ಗಣೇಶೋತ್ಸವ

Udupi: ಆ.25-ಸೆ.7: ವೈಭವದ ಕನ್ನರ್ಪಾಡಿ ಗಣೇಶೋತ್ಸವ

ಲೋಕಬಂಧು ನ್ಯೂಸ್, ಉಡುಪಿ
ಕಿನ್ನಿಮೂಲ್ಕಿ ಕನ್ನರ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 20ನೇ ವರ್ಷದ ಗಣೇಶೋತ್ಸವವನ್ನು ಆ.25ರಿಂದ ಸೆ.7ರ ವರೆಗೆ 14 ದಿನ ಈ ಹಿಂದಿಗಿಂತ ಹೆಚ್ಚು ವೈವಿಧ್ಯಮಯ ಮತ್ತು ವೈಭವದಿಂದ ನಡೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆ.25ರಂದು ಸಂಜೆ ಜೋಡುಕಟ್ಟೆಯಿಂದ ಗಣಪತಿ ಮೈದಾನದ ವರೆಗೆ ಭಕ್ತರ ಭವ್ಯ ಮೆರವಣಿಗೆಯೊಂದಿಗೆ ಗಣೇಶೋತ್ಸವ ಆರಂಭವಾಗಲಿದೆ.


ಗಣೇಶೋತ್ಸವವನ್ನು ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಸ್ವೀಕ‌ರ್ ಯು.ಟಿ.ಖಾದರ್ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜ ಉಗ್ರಾಣ ಮುಹೂರ್ತ, ಡಾ.ಮಂಜುನಾಥ ಭಂಡಾರಿ ಧ್ವಜಾರೋಹಣ, ಮಾಜಿ ಸಚಿವ ವಿನಯಕುಮಾ‌ರ್ ಸೊರಕೆ ವಿದ್ಯುದ್ದೀಪ ಅಲಂಕಾರ, ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್‌ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಅನೇಕ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.


ಆ.26ರಂದು ಧಾರ್ಮಿಕ ಸಭೆಯನ್ನು ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.


ಆ.27ರಂದು ಗಣೇಶನ ವಿಗ್ರಹ ಸ್ಥಾಪನೆ, ಪ್ರಾಣಪ್ರತಿಷ್ಠೆ, ಆ.28ರಂದು 108 ಕಾಯಿ ಗಣಯಾಗ, 29ರಂದು ಲಕ್ಷ್ಮೀಗಣಪತಿ ಹೋಮ, 30ರಂದು ಸಹಸ್ರ ಮೋದಕ ಗಣಯಾಗ, 31ರಂದು ಪ್ರಸನ್ನ ಗಣಪತಿ ಹೋಮ, ಸೆ.1ರಂದು ಬಾಲಗಣಪತಿ ಹೋಮ, 2ರಂದು 1008 ಕಾಯಿ ಗಣಯಾಗ, 3ರಂದು ಏಕಾದಶಿ, 4ರಂದು 108 ಕಾಯಿ ಗಣಯಾಗ, 5ರಂದು ಹರಿದ್ರಾಗಣಪತಿ ಯಾಗ ನಡೆಯಲಿವೆ.


ಸೆ.6ರಂದು ಅಥರ್ವಶೀರ್ಷ ಗಣಯಾಗ, ಸಂಜೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.


ಸೆ.7ರಂದು ಋಣಮೋಚನಾ ಹೋಮ ನಡೆಯಲಿದೆ. ಸಂಜೆ 7 ಗಂಟೆಗೆ ಗಣಪತಿ ವಿಸರ್ಜನ ಮೆರವಣಿಗೆ ಆರಂಭಗೊಳ್ಳಲಿದೆ. ವೈಭವದ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಟ್ಯಾಬ್ಲೊಗಳು, ವಾದ್ಯವೈವಿಧ್ಯಗಳು ಮತ್ತು ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಕರ ಶೇರಿಗಾರ್ ಕನ್ನರ್ಪಾಡಿ, ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ ವಡ್ಡಾಡಿ ಮತ್ತು ರವೀಂದ್ರ ಶೆಟ್ಟಿ ಬಾಣಬೆಟ್ಟು, ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಕಿನ್ನಿಮೂಲ್ಕಿ‌ ಇದ್ದರು.

Ads on article

Advertise in articles 1

advertising articles 2

Advertise under the article