-->
Pajaka ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಕಬ್‌ ಮತ್ತು ಬುಲ್‌ಬುಲ್‌ ಉತ್ಸವ ಸಿದ್ಧತೆ

Pajaka ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಕಬ್‌ ಮತ್ತು ಬುಲ್‌ಬುಲ್‌ ಉತ್ಸವ ಸಿದ್ಧತೆ

ಲೋಕಬಂಧು ನ್ಯೂಸ್,‌ ಉಡುಪಿ
ಪಾಜಕದ ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಕಬ್‌ ಮತ್ತು ಬುಲ್‌ಬುಲ್‌ ಉತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ  ಶಾಲಾ ಆವರಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹಲವು ಗಣ್ಯರ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ‌ ಸಭೆ ನಡೆಯಿತು.ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್. ಸಿಂಧ್ಯಾ, ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಭಟ್, ರಾಜ್ಯ ಸಂಘಟನಾ ಸಹ ಕಾರ್ಯದರ್ಶಿ ಸುಮನ ಶೇಖರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಯಿತು.


ಕಾರ್ಯಕ್ರಮದಲ್ಲಿ 1,200ಕ್ಕೂ ಹೆಚ್ಚು ಕಬ್‌ ಮತ್ತು ಬುಲ್‌ಬುಲ್‌ಗಳು, 250 ಶಿಕ್ಷಕರು ಮತ್ತು 150 ರೋವರ್‌ ಹಾಗೂ ರೇಂಜರ್‌ ಸ್ವಯಂಸೇವಕರು ಭಾಗವಹಿಸಲಿದ್ದಾರೆ.


ಸಭೆಯಲ್ಲಿ ಆನಂದತೀರ್ಥ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ‌ ಮಧ್ವರಾಜ ಭಟ್, ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಡಾ.ಗೀತಾ ಶಶಿಧರ್, ಫ್ಲಾಕ್ ಲೀಡರ್‌ಗಳು, ಕಬ್ ಮಾಸ್ಟರ್‌ಗಳು ಹಾಗೂ ಸ್ಕೌಟ್ ಮತ್ತು ಗೈಡ್ ನಾಯಕರು, ಕಾಲೇಜು ಉಪನ್ಯಾಸಕ ಸೌರಭ್ ಸಿ. ಇದ್ದರು.

Ads on article

Advertise in articles 1

advertising articles 2

Advertise under the article