.jpg)
Udupi: ವಿಶ್ವರೂಪ ದರ್ಶನ ಪ್ರಭಾವಳಿ ಮೆರವಣಿಗೆ
Friday, August 29, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರ ಮಹೋತ್ಸವ ಪ್ರಯುಕ್ತ ಶ್ರೀಪಾದರು ಸಂಕಲ್ಪಿಸಿದಂತೆ ತಮ್ಮ ಆರಾಧ್ಯ ಮೂರ್ತಿ ಉಡುಪಿ ಶ್ರೀಕೃಷ್ಣನಿಗೆ ವಿಶ್ವರೂಪ ದರ್ಶನ ಹಿನ್ನೆಲೆಯ ಸುವರ್ಣ ಪ್ರಭಾವಳಿಯನ್ನು ಶನಿವಾರ ಅರ್ಪಿಸಲಿದ್ದು ಚಿನ್ನದ ಪ್ರಭಾವಳಿಯನ್ನು ಶುಕ್ರವಾರ ರಥಬೀದಿಯಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡು ಶ್ರೀಮಠಕ್ಕೆ ತರಲಾಯಿತು.