Brahmavara: ಮದುವೆ ನಿರಾಕರಣೆ ಪ್ರಕರಣ: ಚೂರಿ ಇರಿತಗೊಂಡ ಯುವತಿ ಸಾವು; ಭಗ್ನ ಪ್ರೇಮಿಯೂ ಆತ್ಮಹತ್ಯೆ
Friday, September 12, 2025
ಲೋಕಬಂಧು ನ್ಯೂಸ್, ಬ್ರಹ್ಮಾವರ
ಮದುವೆಗೆ ನಿರಾಕರಿಸಿದ ಕಾರಣಕ್ಕೆ ಕೊಕ್ಕರ್ಣೆ ಪುತ್ತನಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಚೂರಿ ಇರಿತಕ್ಕೊಳಗಾಗಿದ್ದ ರಕ್ಷಿತಾ ಪೂಜಾರಿ (24) ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಸಂಜೆ ಕೊನೆಯುಸಿರೆಳೆದಿದ್ದಾಳೆ. ಮತ್ತೊಂದೆಡೆ ಚಾಕಿನಿಂದ ತಿವಿದಿದ್ದ ಭಗ್ನ ಪ್ರೇಮಿ ಕೊಕ್ಕರ್ಣೆ ಚೆಗರಿಬೆಟ್ಟು ನಿವಾಸಿ ಕಾರ್ತಿಕ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಘಟನೆ ಬಳಿಕ ಆತ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ಸಮೀಪದ ಬಾವಿಯಲ್ಲಿ ಕಾರ್ತಿಕ್ ಮೃತದೇಹ ಪತ್ತೆಯಾಗಿದೆ.
ರಕ್ಷಿತಾಳ ಹುಟ್ಟುಹಬ್ಬದ ದಿನವೇ ಈ ದುರ್ಘಟನೆ ಸಂಭವಿಸಿದೆ.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.