
Padubidri: ಮಾದಕ ವಸ್ತು ಮಾರಾಟ ಯತ್ನ: ಈರ್ವರ ಬಂಧನ
Friday, September 19, 2025
ಲೋಕಬಂಧು ನ್ಯೂಸ್, ಪಡುಬಿದ್ರಿ
ಇಲ್ಲಿನ ಬಡಾ ಗ್ರಾಮದ ಉಚ್ಚಿಲ ಪೊಲ್ಯ ಬುಬಲ್ ಮೈದಾನ ಬಳಿ ಎಂಬಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು, ಸ್ಥಳಕ್ಕೆ ತೆರಳಿದಾಗ ಈರ್ವರು ಮೋಟರ್ ಸೈಕಲ್ ನಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿರುವುದು ಕಂಡುಬಂದಿದ್ದು, ಕಾಪು ಮಲ್ಲಾರು ಫಕೀರನ ಕಟ್ಟೆ ಮಸೀದಿ ಬಳಿಯ ನಿವಾಸಿ ಫರ್ಹನ್ ಮತ್ತು ಮಜೂರು ಗ್ರಾಮ ನಿವಾಸಿ ಮೊಹಮ್ಮದ್ ಹಾಶಿಂ ಎಂಬವರಿಂದ 9.30 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಹಾಗೂ ನಗದು 5 ಸಾವಿರ ರೂ. ವಶಪಡಿಸಿಕೊಂಡರು.
ಸುಮಾರು 1.80 ಲಕ್ಷ ರೂ. ಮೌಲ್ಯದ ಮೋಟಾರು ಸೈಕಲ್ ಮತ್ತು 6 ಸಾವಿರ ರೂ. ಮೌಲ್ಯದ 2 ಮೊಬೈಲ್ ಫೋನ್'ಗಳನ್ನು ವಶಪಡಿಸಿಕೊಳ್ಳಲಾಯಿತು. ಅವರೀರ್ವರನ್ನೂ ಬಂಧಿಸಲಾಗಿದೆ.