New Delhi: ನವರಾತ್ರಿಯ ಮೊದಲ ದಿನದಿಂದಲೇ ಜಿಎಸ್‌ಟಿ ಪರಿಷ್ಕೃತ ದರ ಜಾರಿ
Monday, September 22, 2025
ಲೋಕಬಂಧು ನ್ಯೂಸ್, ನವದೆಹಲಿ
ನವರಾತ್ರಿಯ ಮೊದಲ ದಿನ ಸೆ.22ರಿಂದಲೇ ಜಿಎಸ್‌ಟಿ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದರು.
ನವರಾತ್ರಿ ಹಬ್ಬದೊಂದಿಗೆ ಜಿಎಸ್‌ಟಿ ಬಚತ್ (ಉಳಿಕೆ) ಉತ್ಸವ ಕೂಡಾ ಪ್ರಾರಂಭವಾಗಲಿದೆ ಎಂದರು.
ಜಿಎಸ್‌ಟಿ ಪರಿಷ್ಕೃತ ದರ 2.0 ಜಾರಿಯಿಂದಾಗಿ ಮಧ್ಯಮ ವರ್ಗದ ಜನರಿಗೆ ಹೊಸ ಜಿಎಸ್‌ಟಿ ಉಪಯೋಗ ಆಗಲಿದೆ. ಜನರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿ ಮಾಡಬಹುದು.
ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ದೇಶವನ್ನು ಈ ಪರಿಸ್ಥಿತಿಯಿಂದ ಹೊರ ತರುವುದು ಮುಖ್ಯವಾಗಿದ್ದು ಈಗ ಒಂದು ದೇಶ, ಒಂದು ತೆರಿಗೆ ಸಾಕಾರವಾಗಿದೆ ಎಂದರು.
ಜಿಎಸ್‌ಟಿ ಸುಧಾರಣೆಗಳು ದೇಶದ ಬೆಳವಣಿಗೆಗೆ ವೇಗ ನೀಡುತ್ತವೆ ಮತ್ತು ವ್ಯವಹಾರವನ್ನು ಸರಳಗೊಳಿಸುತ್ತವೆ. ಅಷ್ಟೇ ಅಲ್ಲದೇ ಹೂಡಿಕೆಯತ್ತ ಹೆಚ್ಚು ಆಕರ್ಷಕವಾಗಿಸುತ್ತವೆ. ಅಭಿವೃದ್ಧಿಯಲ್ಲಿ ಪ್ರತಿ ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ ಎಂದು ಮೋದಿ ತಿಳಿಸಿದರು.