
Swimming competition: ಕಾರ್ಕಳ ಜ್ಞಾನಸುಧಾದ 6 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
Saturday, September 20, 2025
ಲೋಕಬಂಧು ನ್ಯೂಸ್, ಕಾರ್ಕಳ
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ತೋಷಿತ್ ಎಸ್. ಬಾಬು 50ಮೀ ಮತ್ತು 100 ಮೀ ಫ್ರೀಸ್ಟೈಲ್'ನಲ್ಲಿ ಪ್ರಥಮ ಹಾಗೂ 50 ಮೀ. ಬ್ರೆಸ್ಟ್ ಸ್ಟ್ರೋಕ್'ನಲ್ಲಿ ದ್ವಿತೀಯ, ಸುಯಾಶ್ ಎನ್. ಹೆಗ್ಡೆ 100 ಮೀ ಬಟರ್ ಫ್ಲೈ'ನಲ್ಲಿ ಪ್ರಥಮ ಮತ್ತು 100 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ತೃತೀಯ ಸ್ಥಾನ, ಶಶಾಂಕ್ ವಿ. 50 ಮೀ. ಬಟರ್ ಫ್ಲೈನಲ್ಲಿ ಪ್ರಥಮ ಮತ್ತು 400 ಮೀ. ಫ್ರೀ ಸ್ಟೈಲ್'ನಲ್ಲಿ ತೃತೀಯ ಸ್ಥಾನ, ಯು. ಭಕ್ತಿ 50 ಮೀ. ಮತ್ತು 100 ಮೀ. ಬ್ರೆಸ್ಟ್ ಸ್ಟ್ರೋಕ್'ನಲ್ಲಿ ಪ್ರಥಮ ಸ್ಥಾನ, ಶ್ರೇಯಾ ಎಸ್.ಆರ್.ಯು. 50 ಮೀ. ಮತ್ತು 100 ಮೀ ಫ್ರೀ ಸ್ಟೈಲ್'ನಲ್ಲಿ ಪ್ರಥಮ ಸ್ಥಾನ ಹಾಗೂ 4*100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದ ದಿಗಂತ್ ಎಚ್. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅಭಿನಂದಿಸಿದ್ದಾರೆ.