-->
Udupi: ಲಕ್ಷ್ಮೀವರತೀರ್ಥ ಸ್ಮರಣಾರ್ಥ ಚಕ್ಕುಲಿ ವಿತರಣೆ

Udupi: ಲಕ್ಷ್ಮೀವರತೀರ್ಥ ಸ್ಮರಣಾರ್ಥ ಚಕ್ಕುಲಿ ವಿತರಣೆ

ಲೋಕಬಂಧು ನ್ಯೂಸ್, ಉಡುಪಿ
ವೃಂದಾವನಸ್ಥ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಸ್ಮರಣಾರ್ಥ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಪ್ರಯುಕ್ತ ಸೋಮವಾರ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಸುಮಾರು 10 ಸಾವಿರ ಚಕ್ಕುಲಿ ವಿತರಿಸಲಾಯಿತು.
ನಗರದ‌ ಮಾರುತಿ ವೀಥಿಕಾದ ಸ್ವದೇಶ್ ಹೋಟೆಲ್‌ ಎದುರು ನಡೆ‌ದ ಕಾರ್ಯಕ್ರಮದಲ್ಲಿ ಡಿವೈಎಸ್.ಪಿ ಪ್ರಭು ಡಿ.ಟಿ., ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ,‌ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ವಿಕಾಸ್ ಶೆಟ್ಟಿ, ನಾಗಭೂಷಣ್ ಶೇಟ್ ವಳಕಾಡು,‌ ಸಮಾಜಸೇವಕರಾದ ಭಾಸ್ಕರ್ ಶೇರಿಗಾರ್, ನಿತ್ಯಾನಂದ ಒಳಕಾಡು, ಶಂಕರ ಶೆಟ್ಟಿ ಚಿಟ್ಪಾಡಿ, ಉದ್ಯಮಿ ಎಂ. ಶ್ರೀನಾಗೇಶ್ ಹೆಗ್ಡೆ, ವಾಸುದೇವ ಚಿಟ್ಪಾಡಿ, ನಾಗರಿಕ ಸಮಿತಿಯ ಪದಾಧಿಕಾರಿಗಳು, ತೈಲ ಖಾದ್ಯತಜ್ಞ ಶಂಕರ ನಾಯ್ಕ್ ಇದ್ದರು.


ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಾಗರಿಕ ಸಮಿತಿಯ ನಿತ್ಯಾನಂದ ವಳಕಾಡು ಮಾತನಾಡಿ, ಜನ್ಮಾಷ್ಟಮಿಗೆ ವಿಶೇಷ ಮೆರಗು ನೀಡುತ್ತಿದ್ದ ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ನೆನಪಿಗಾಗಿ ದಾನಿಗಳ‌ ಸಹಕಾರದಿಂದ ಕಳೆದ ಆರು ವರ್ಷದಿಂದ ಚಕ್ಕುಲಿ ವಿತರಿಸಲಾಗುತ್ತಿದೆ ಎಂದರು.

Ads on article

Advertise in articles 1

advertising articles 2

Advertise under the article