.jpg)
Udupi: ಸಹಸ್ರಾರು ಮಂದಿಗೆ ಅನ್ನ ಪ್ರಸಾದ ವಿತರಣೆ
Monday, September 15, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ದ್ವಿತೀಯಾರ್ಧದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವ ಸಂಭ್ರಮದಿಂದ ನಡೆದಿದ್ದು, ಸೋಮವಾರ ಸಹಸ್ರಾರು ಮಂದಿ ಅನ್ನಪ್ರಸಾದ ಭೋಜನ ಸವಿದರು.
ಬೆಳಗ್ಗೆ ಶ್ರೀಕೃಷ್ಣನಿಗೆ ಮಹಾಪೂಜೆ ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪಲ್ಲಪೂಜೆ ನಡೆಸಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಬಳಿಕ ಕೃಷ್ಣಮಠದ ಭೋಜನಶಾಲೆ, ಅನ್ನಬ್ರಹ್ಮ ಹಾಗೂ ರಾಜಾಂಗಣಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಬಾಳೆಎಲೆಯಲ್ಲಿ ಮತ್ತು ಬಫೆ ಪದ್ಧತಿಯಲ್ಲಿ ಊಟ ನೀಡಲಾಗಿದ್ದು ಸುಮಾರು 50 ಸಾವಿರ ಮಂದಿ ಅನ್ನಪ್ರಸಾದ ಭೋಜನ ಸ್ವೀಕರಿಸಿದರು.
ಭಕ್ತರಿಗೆ ಊಟದೊಂದಿಗೆ ಹಾಲುಪಾಯಸ, ಉಂಡೆ ಚಕ್ಕುಲಿ ವಿತರಿಸಲಾಯಿತು