
Udupi: ಡಾ.ಎಕ್ಕಾರು ರೆಡ್'ಕ್ರಾಸ್ ರಾಜ್ಯ ಸಲಹೆಗಾರ
Saturday, September 13, 2025
ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ರಾಜ್ಯ ರೆಡ್'ಕ್ರಾಸ್ ಸಂಸ್ಥೆಯ ಯುವ ರೆಡ್'ಕ್ರಾಸ್ ಉಪಸಮಿತಿಯ ರಾಜ್ಯ ಸಲಹೆಗಾರರನ್ನಾಗಿ ಉಡುಪಿ ಜಿಲ್ಲಾ ರೆಡ್'ಕ್ರಾಸ್ ಕಾರ್ಯದರ್ಶಿ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಅವರನ್ನು ರಾಜ್ಯ ರೆಡ್'ಕ್ರಾಸ್ ಸಂಸ್ಥೆ ನೇಮಿಸಿದೆ.
ರಾಜ್ಯ ರೆಡ್'ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆಯ ಯುವ ರೆಡ್'ಕ್ರಾಸ್ ರಾಜ್ಯ ಉಪಸಮಿತಿಯ ಸಲಹೆಗಾರರಾಗಿ ಮುಂದಿನ ಮೂರು ವರ್ಷಗಳಿಗೆ ಡಾ.ಎಕ್ಕಾರು ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ರೆಡ್'ಕ್ರಾಸ್ ಪ್ರಕಟನೆ ತಿಳಿಸಿದೆ.