-->
Udupi: ಸಹಜ ಜೀವನಕ್ಕೆ ಒತ್ತುನೀಡಿ

Udupi: ಸಹಜ ಜೀವನಕ್ಕೆ ಒತ್ತುನೀಡಿ

ಲೋಕಬಂಧು ನ್ಯೂಸ್, ಉಡುಪಿ
ಪ್ರಸ್ತುತ ಮನುಷ್ಯ ದುರ್ಬಲನಾಗಿ ಯಂತ್ರಗಳು ಪ್ರಭಾವಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮನುಷ್ಯ ಜೀವನವೇ ಅಂತ್ಯವಾಗಲಿದೆಯೇ ಎಂಬ ಆತಂಕ ಹುಟ್ಟುತ್ತದೆ. ಎಐನಿಂದ ದೊಡ್ಡ ವಿಪ್ಲವ ಶುರುವಾಗಿದೆ. ಹೀಗಾಗಿ ಸಹಜ ಜೀವನಕ್ಕೆ ವಿಶೇಷ ಒತ್ತುನೀಡುವ ಜೊತೆಗೆ ಆಧುನಿಕ ಜೀವನ ಶೈಲಿಗೆ ಮಾರುಹೋಗಬಾರದು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಲಹೆ ನೀಡಿದರು.ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ, ಆಶೀರ್ವಚನ ನೀಡಿದರು.


ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.


ಸಾಯಿರಾಧಾ ಮೋಟರ್ಸ್ ವ್ಯವಸ್ಥಾಪಕ ಪ್ರಕಾಶ್ ತಂತ್ರಿ, ಮುಂಬೈ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ, ಜಿಲ್ಲಾ ಪ್ರಮುಖ್ ಜಗದೀಶ್ ಅಧಿಕಾರಿ, ಶ್ರೀಮಠದ ಅಧಿಕಾರಿಗಳು ಉಪಸ್ಥಿತರಿದ್ದರು.


ಗೀತೋತ್ಸವ
ನ.1 ರಿಂದ ನ.30ರ ವರೆಗೆ ಗೀತೋತ್ಸವ ನಡೆಯಲಿದೆ. ನ.30ಕ್ಕೆ ಒಂದು ಲಕ್ಷ ಭಕ್ತರಿಂದ ಭಗವದ್ಗೀತೆ ಪಠನ ನಡೆಯಲಿದೆ ಎಂದು ಪುತ್ತಿಗೆ ಶ್ರೀಪಾದರು ತಿಳಿಸಿದರು.

Ads on article

Advertise in articles 1

advertising articles 2

Advertise under the article