.jpg)
Udupi: ವಿಟ್ಲಪಿಂಡಿ ಉತ್ಸವಕ್ಕಾಗಿ ಮೃಣ್ಮಯ ಕೃಷ್ಣಮೂರ್ತಿ
Sunday, September 14, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಜನ್ಮಾಷ್ಠಮಿ ವಿಟ್ಲಪಿಂಡಿ ಮಹೋತ್ಸವಕ್ಕಾಗಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿ ಸಿದ್ಧಪಡಿಸಲಾಯಿತು.
ಚಾತುರ್ಮಾಸ್ಯ ಕಾರಣದಿಂದಾಗಿ ಶ್ರೀಕೃಷ್ಣನ ಉತ್ಸವ ಮೂರ್ತಿ ಗರ್ಭಗುಡಿಯಿಂದ ಹೊರಬರುವಂತಿಲ್ಲ. ಆ ಕಾರಣದಿಂದಾಗಿ ಕೃಷ್ಣನ ಮಣ್ಣಿನ ಮೂರ್ತಿಯನ್ನು ಸಿದ್ಧಪಡಿಸಲಾಗುತ್ತದೆ.
ಖ್ಯಾತ ಕಲಾವಿದ ಸೋಮನಾಥ್ ಸಿದ್ಧಪಡಿಸಿದ ಮೂರ್ತಿಯನ್ನು ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರಿಗೆ ಹಸ್ತಾಂತರಿಸಿದರು.
ಶ್ರೀಕೃಷ್ಣಮಠದಲ್ಲಿ ಅದನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ವಿಟ್ಲಪಿಂಡಿ ಉತ್ಸವದಂದು ಪರ್ಯಾಯ ಶ್ರೀಗಳು ಶೋಡಷೋಪಚಾರ ಪೂಜೆ ನಡೆಸಿ, ಚಿನ್ನದ ಪಲ್ಲಕಿಯಲ್ಲಿಟ್ಟು ರಥಬೀದಿಗೆ ತಂದು ಚಿನ್ನದ ರಥೋತ್ಸವ ನಡೆಸಲಾಗುವುದು. ಬಳಿಕ ಮಧ್ವಸರೋವರದಲ್ಲಿ ಜಲಸ್ತಂಭನಗೊಳಿಸಲಾಗುವುದು.