.jpg)
Udupi: ಶ್ರೀಕೃಷ್ಣ ಮಂತ್ರ ಜಪಾನುಷ್ಠಾನ
Sunday, September 14, 2025
ಲೋಕಬಂಧು ನ್ಯೂಸ್, ಉಡುಪಿ
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಾನುವಾರ ಸೂರ್ಯೋದಯದಿಂದ ತೊಡಗಿ ಸೂರ್ಯಾಸ್ತದ ವರೆಗೆ ಸ್ವಾಮಿ ಶ್ರೀಕೃಷ್ಣಾಯ ನಮಃ ಮಂತ್ರ ಪಠಣ ನಡೆದಿದ್ದು, ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ದೀಪ ಬೆಳಗಿಸಿ ಚಾಲನೆ ನೀಡಿದರು.
ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಾಗೂ ಪತಂಜಲಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್, ವೆಂಕಟೇಶ ಮೆಹಂದಳೆ, ಜಗದೀಶ್ ಕುಮಾರ್, ಲೀಲಾ ಆರ್. ಅಮೀನ್ ಮೊದಲಾದವರಿದ್ದರು.
ವಿವಿಧ ವಿಪ್ರ ಸಂಘಟನೆಗಳವರು ಹಾಗೂ ಭಕ್ತಾದಿಗಳು ಮಂತ್ರ ಜಪಾನುಷ್ಠಾನ ನಡೆಸಿದರು.