Pejavar Sri: ಡಿ.16: ಉಡುಪಿಯಲ್ಲಿ ಪೇಜಾವರ ಶ್ರೀ 60- ಗುರುವಂದನೆ
Saturday, November 18, 2023
ಉಡುಪಿ, ನ.18 (ಲೋಕಬಂಧು ವಾರ್ತೆ): ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಸಾರ್ಥಕ 60 ಸಂವತ್ಸರ ಹಿನ್ನೆಲೆಯಲ್ಲಿ ಡಿಸೆಂಬರ್ 18ರಂದು ಅಭಿವಂದನೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಶನಿವಾರ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀಗಳ ಅಭಿಮಾನಿಗಳು ಹಾಗೂ ಶ್ರೀಮಠದ ಭಕ್ತರ ಸಮಾಲೋಚನ ಸಭೆಯಲ್ಲಿ ನಿರ್ಧರಿಸಲಾಯಿತು.
ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದ ಗೌರವಾಧ್ಯಕ್ಷತೆ ಹಾಗೂ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷ ತೆಯಲ್ಲಿ ಸಮಿತಿ ರಚಿಸಲಾಯಿತು.
ದಿನಪೂರ್ತಿ ಧಾರ್ಮಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ದೇಶಕ್ಕೇ ಉತ್ತಮ ಸಂದೇಶ ನೀಡುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯ ಪ್ರಮುಖರು ಆಶಿಸಿದರು.
ಡಿ. 16ರ ಬೆಳಿಗ್ಗೆ 1 ಲಕ್ಷ ಕೃಷ್ಣ ಮಂತ್ರ ಯಾಗ ಲೋಕಕಲ್ಯಾಣಾರ್ಥವಾಗಿ ನಡೆಯಲಿದೆ. ನೀಲಾವರ ಗೋಶಾಲೆ ಆವರಣದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣೆಯ ಸ್ಮೃತಿವನ ಉದ್ಘಾಟನೆ, ಶ್ರೀ ವಿಶ್ವೇಶತೀರ್ಥ ಶ್ರೀಪಾದರ 10 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಲಾಗುವುದು. ಸಂಜೆ 5.30ರಿಂದ ರಥಬೀದಿಯಲ್ಲಿ ಪೇಜಾವರ ಶ್ರೀ ಅಭಿನಂದನಾ ಕಾರ್ಯಕ್ರಮ, ಗುರುವಂದನೆಗೆ ಮುನ್ನ ಭಜನಾ ಮಂಡಳಿಗಳನ್ನೊಳಗೊಂಡ ಮೆರವಣಿಗೆ ಜೋಡುಕಟ್ಟೆಯಿಂದ ಬರಲಿದೆ. ಸುಮಾರು 40 ಲಕ್ಷ ರೂ. ವೆಚ್ಚವಾಗಲಿದ್ದು, ಉಳಿಕೆ ಹಣವನ್ನು ರಾಮರಾಜ್ಯದ ಕಲ್ಪನೆಯ ಕಾರ್ಯಕ್ರಮಗಳಿಗೆ ಬಳಲಾಗುವುದು ಎಂದು ಶಾಸಕ ಯಶಪಾಲ್ ಸುವರ್ಣ ತಿಳಿಸಿದರು.
ಸಂಜೆ 5.30ರಿಂದ ರಥಬೀದಿಯಲ್ಲಿ ಪೇಜಾವರ ಶ್ರೀ ಅಭಿನಂದನಾ ಕಾರ್ಯಕ್ರಮ, ಗುರುವಂದನೆಗೆ ಮುನ್ನ ಭಜನಾ ಮಂಡಳಿಗಳನ್ನೊಳಗೊಂಡ ಮೆರವಣಿಗೆ ಜೋಡುಕಟ್ಟೆಯಿಂದ ಬರಲಿದೆ.
ಸುಮಾರು 40 ಲಕ್ಷ ರೂ. ವೆಚ್ಚವಾಗಲಿದ್ದು, ಉಳಿಕೆ ಹಣವನ್ನು ರಾಮರಾಜ್ಯದ ಕಲ್ಪನೆಯ ಕಾರ್ಯಕ್ರಮಗಳಿಗೆ ಬಳಲಾಗುವುದು ಸಂಜೆ 5.30ರಿಂದ ರಥಬೀದಿಯಲ್ಲಿ ಪೇಜಾವರ ಶ್ರೀ ಅಭಿನಂದನಾ ಕಾರ್ಯಕ್ರಮ, ಗುರುವಂದನೆಗೆ ಮುನ್ನ ಭಜನಾ ಮಂಡಳಿಗಳನ್ನೊಳಗೊಂಡ ಮೆರವಣಿಗೆ ಜೋಡುಕಟ್ಟೆಯಿಂದ ಬರಲಿದೆ. ಸುಮಾರು 40 ಲಕ್ಷ ರೂ. ವೆಚ್ಚವಾಗಲಿದ್ದು, ಉಳಿಕೆ ಹಣವನ್ನು ರಾಮರಾಜ್ಯದ ಕಲ್ಪನೆಯ ಕಾರ್ಯಕ್ರಮಗಳಿಗೆ ಬಳಲಾಗುವುದು ಯಶಪಾಲ್ ಸುವರ್ಣ ತಿಳಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ತಾಲೂಕು ಬ್ರಾಹ್ಮಣ ಸಂಘ ಅಧ್ಯಕ್ಷ ಮಂಜುನಾಥ ಉಪಾಧ್ಯ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಗಣ್ಯರಾದ ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಭಟ್, ಎಂ. ರಘುರಾಮ ಆಚಾರ್ಯ, ಸೂರ್ಯನಾರಾಯಣ ಉಪಾಧ್ಯಾಯ ಕುಂಭಾಸಿ, ಶ್ರೀರಮಣ ಉಪಾಧ್ಯಾಯ ಕುಂಭಾಶಿ, ದಿನಕರಬಾಬು, ಜಯ ಸಿ. ಕೋಟ್ಯಾನ್, ದಯಾನಂದ ಸುವರ್ಣ, ಯೋಗೀಶ್ ಶೆಟ್ಟಿ ಕಾಪು, ಕಾಪು ವಾಸುದೇವ ಶೆಟ್ಟಿ, ಸಾಧು ಸಾಲ್ಯಾನ್, ವಿಷ್ಣುಮೂರ್ತಿ ಆಚಾರ್ಯ, ಗುರುದಾಸ್ ಶೆಣೈ, ರವಿ ರಾವ್, ಸೌರಭ್ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ, ವೀಣಾ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಲಕ್ಷ್ಮೀ ಮಂಜುನಾಥ್, ಶ್ರೀಶ ಕೊಡವೂರು, ಕೃಷ್ಣರಾವ್ ಕೊಡಂಚ, ಯೋಗೀಶ್ ಸಾಲ್ಯಾನ್, ಶ್ರೀಕಾಂತ ಉಪಾಧ್ಯಾಯ, ರಾಘವೇಂದ್ರ ಕಿಣಿ, ಕೃಷ್ಣ ದೇವಾಡಿಗ, ಪದ್ಮನಾಭ ಭಟ್, ಕಿರಣ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಿ. ಉಮೇಶ್ ರಾವ್, ಪ್ರೊ. ಹರೀಶ್ ಜೋಶಿ, ಅಜಿತ್ ಕೊಡವೂರು, ಶ್ರೀಧರ ಭಟ್, ಸತೀಶ್ ಕುಮಾರ್, ಪ್ರಶಾಂತ್ ಹೆಗ್ಡೆ, ಕಮಲಾಕ್ಷ ಹೆಬ್ಬಾರ್, ಪ್ರಸಾದ್ ಭಟ್ ಪೇತ್ರಿ ಸೇರಿದಂತೆ ನೂರಾರು ಮಂದಿ ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದರು.
ಮಾಯಾ ಕಾಮತ್ ಪ್ರಾರ್ಥನೆಗೈದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿ, ವಂದಿಸಿದರು.