-->
Pejavar Sri: ಪೇಜಾವರಶ್ರೀ 60: ನ.18- ಉಡುಪಿಯಲ್ಲಿ ಗುರುವಂದನ ಪೂರ್ವಭಾವಿ ಸಭೆ

Pejavar Sri: ಪೇಜಾವರಶ್ರೀ 60: ನ.18- ಉಡುಪಿಯಲ್ಲಿ ಗುರುವಂದನ ಪೂರ್ವಭಾವಿ ಸಭೆ

ಉಡುಪಿ, ನ.15 (ಲೋಕಬಂಧು ವಾರ್ತೆ): ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿಶ್ವಸ್ಥರಾಗಿ ಉಡುಪಿಗೇ ಹೆಮ್ಮೆ ತಂದಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಸಾರ್ಥಕ ಜೀವನದ 60ರ ಸಂಭ್ರಮ.ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನ್ವರ್ಥ ಶಿಷ್ಯರಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲೇ ಹೆಜ್ಜೆ ಹಾಕುತ್ತಾ ಗೋ ಸೇವೆ, ವೇದ ಶಾಸ್ತ್ರಾಧ್ಯಯನ- ಅಧ್ಯಾಪನ, ಶಿಕ್ಷಣ, ಆರೋಗ್ಯ, ದೀನ ಜನ ಶುಶ್ರೂಷೆ, ಧರ್ಮ ರಕ್ಷಣೆಯೇ‌ ಮೊದಲಾದ ಬಹುಮುಖಿ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ನಿರಂತರ ದೇಶ ಸಂಚಾರದ ಮೂಲಕ ಜನರಲ್ಲಿ ರಾಮ ಭಕ್ತಿ ಜೊತೆಗೆ ದೇಶ ಭಕ್ತಿಯ ಜಾಗೃತಿ ಮೂಡಿಸುತ್ತಿರುವ ಶ್ರೀಪಾದರ ಷಷ್ಠ್ಯಬ್ದಿ ಮಹೋತ್ಸವ ಪ್ರಯುಕ್ತ ಅವರನ್ನು ಅಭಿವಂದಿಸುವುದು ಕೇವಲ ಅವರ ಶಿಷ್ಯರು, ಭಕ್ತರು, ಅಭಿಮಾನಿಗಳಿಗೆ ಮಾತ್ರವಲ್ಲದೇ ಉಡುಪಿಯ ಜನತೆಗೇ ಒದಗಿದ ಒಂದು ಭಾಗ್ಯ.

ಈ ಕಾರ್ಯಕ್ರಮವನ್ನು ಜಿಲ್ಲೆಯ ಸಮಸ್ತ ನಾಗರಿಕರ ಸಹಕಾರ, ಸಹಯೋಗ ಪಡೆದು ವೈಭವಯುತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಯ ಸಂಕಲ್ಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನ. 18ರಂದು ಸಂಜೆ 5.30 ಗಂಟೆಗೆ ಅಜ್ಜರಕಾಡು ಶ್ರೀ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಕರೆಯಲಾಗಿದೆ.

ಸಭೆಯಲ್ಲಿ ಪೇಜಾವರ ಮಠ ಮತ್ತು ಶ್ರೀಗಳ ಅಭಿಮಾನಿಗಳು, ಭಕ್ತರು, ವಿದ್ವಾಂಸರು, ದೇವಸ್ಥಾನಗಳ ಧರ್ಮದರ್ಶಿಗಳು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು, ಭಜನಾ ಮಂಡಳಿ, ಹಿಂದೂ ಸಂಘಟನೆಗಳು, ವಿವಿಧ ಸಮಾಜ ಸೇವಾ ಸಂಸ್ಥೆಗಳು, ಜಾತಿ ಸಮುದಾಯಗಳ ಪ್ರತಿನಿಧಿಗಳು ಹಾಗೂ ಸಮಾನ‌ ಮನಸ್ಕರು ಭಾಗವಹಿಸಿ ಸಲಹೆ ಸೂಚನೆಗಳನ್ನಿತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ವಿನಂತಿಸಿದ್ದಾರೆ.

Ads on article

Advertise in articles 1

advertising articles 2

Advertise under the article