ಮೈತ್ರಿ ಪುರಸ್ಕಾರಕ್ಕೆ ಆಯ್ಕೆ
Wednesday, November 15, 2023
ಲೋಕಬಂಧು ನ್ಯೂಸ್, ಬೆಂಗಳೂರು
ಇಲ್ಲಿನ ಮೈತ್ರಿ ಸಂಸ್ಕೃತ ಪ್ರತಿಷ್ಠಾನ ನೀಡುವ 2023ನೇ ಸಾಲಿನ ಮೈತ್ರಿ ಪುರಸ್ಕಾರಕ್ಕೆ ಶಿರಸಿಯ ಇಬ್ಬರು ಹಿರಿಯ ವಿದ್ವಾಂಸರು ಆಯ್ಕೆಯಾಗಿದ್ದಾರೆ.
ವ್ಯಾಸ ಯೋಗ ವಿಶ್ವವಿದ್ಯಾಲಯದ ಕುಲಪತಿ, ವೇದ ವಿಜ್ಞಾನ ಶೋಧ ಸಂಸ್ಥಾನದ ಅಧ್ಯಕ್ಷ, ಮೂಲತಃ ಯಲ್ಲಾಪುರ ತಾಲೂಕಿನ ಕೋಟೆಮನೆ ಪ್ರೊ. ರಾಮಚಂದ್ರ ಜಿ. ಭಟ್ಟ ಹಾಗೂ ಬಹುಶೃತ ವಿದ್ವಾಂಸ, ತಾಳಮದ್ದಲೆ ಅರ್ಥದಾರಿ, ಪ್ರವಚನಕಾರ, ನಿವೃತ್ತ ಪ್ರಾಚಾರ್ಯ, ವಿದ್ಯಾವಾಚಸ್ಪತಿ ಕೆರೆಕೈ ಉಮಕಾಂತ ಕೃಷ್ಣ ಭಟ್ಟ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ನ.19ರಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪುರಸ್ಕಾರ ಸಮಾರಂಭ ನಡೆಯಲಿದೆ.