-->
Basavanna: ಕಾಯಕ ನಿಷ್ಠೆಯ ಬಸವಣ್ಣ

Basavanna: ಕಾಯಕ ನಿಷ್ಠೆಯ ಬಸವಣ್ಣ

ಭಕ್ತಿಭಂಡಾರಿ ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ಪ್ರತ್ಯೇಕತೆ, ಮೂಢನಂಬಿಕೆಗಳನ್ನು ಬಲವಾಗಿ ವಿರೋಧಿಸಿದರು. ಇಷ್ಟಲಿಂಗ ಪೂಜೆಯನ್ನು ಪರಿಚಯಿಸಿ, ಶಿವನನ್ನು ಭಕ್ತಿಯಿಂದ  ಆರಾಧಿಸಲು ಸರಳ ಹಾಗೂ ವಿಶಿಷ್ಟ ಆರಾಧನಾ ಮಾರ್ಗ ಸೂಚಿಸಿದರು.
ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ ಅನುಭವ ಮಂಟಪ (ಆಧ್ಯಾತ್ಮಿಕ ಭವನ) ಸ್ಥಾಪಿಸಿ ಸಮಾಜದ ಎಲ್ಲಾ ವರ್ಗದ ಜನತೆ ಸ್ತ್ರೀ ಪುರುಷ ಭೇದವಿಲ್ಲದೆ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಪ್ರಧಾನ ವೇದಿಕೆ ಸೃಷ್ಟಿಸಿದ.


ಬಸವಣ್ಣನ ಜೊತೆ 1,96,000 ಶರಣರಿದ್ದರು ಎಂಬ ಪುರಾವೆಗಳಿವೆ.


ಮಂತ್ರಿಯಾಗಿ ಬಸವಣ್ಣ ಅದೆಷ್ಟೋ ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದ.


ಕಾಯಕವೇ ಕೈಲಾಸ ಎಂದು ಸಾರಿ, ಜನರನ್ನು ದುಡಿದು ಬದುಕುವ ಮಾರ್ಗದಲ್ಲಿ ಮುನ್ನೆಡೆಸಿದ. ತಮ್ಮ ತಮ್ಮ ವೃತ್ತಿಯನ್ನು ಗೌರವಿಸಿ ಅನುಸರಿಸುವಂತೆ ಪ್ರೇರಣೆ ನೀಡಿದ.


ಜಾತಿ, ಲಿಂಗ, ಭಾಷೆ ಭೇದವಿಲ್ಲದೆ ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ ಶಿವಶರಣ ಎಂದು ಕರೆದ.


ಇವನಾರವ ಇವನಾರವ ಇವನಾರವನೆಂದೆಣಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯ
ಎಂಬ ತಮ್ಮ ಪ್ರಸಿದ್ಧ ವಚನದ ಮೂಲಕ ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯಕ್ಕೆ ಕರೆಕೊಟ್ಟ ಧೀಮಂತ.


ಬಸವಣ್ಣನ ವಚನಗಳು ಕನ್ನಡ ಸಾಹಿತ್ಯದ ವಿಶಿಷ್ಟ ರೂಪವಾಗಿದ್ದು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಜನಜಾಗೃತಿ ಮೂಡಿಸುವ ಆತನ ವಚನಗಳು ಸದ್ಗುಣಗಳು ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ.


ಬಸವಣ್ಣ ಅಂಥ ಸುಮಾರು  5 ಸಾವಿರ ವಚನಗಳನ್ನು ರಚಿಸಿದ್ದಾನೆ. ಕೂಡಲಸಂಗಮದೇವ ಆತನ ಕಾವ್ಯನಾಮ.


ಆಧುನಿಕ ಕರ್ನಾಟಕದ ಸರ್ವಾಂಗೀಣ ಉನ್ನತಿಯಲ್ಲಿ ಬಸವ ತತ್ವ ಮಹತ್ವದ ಸ್ಥಾನ ಹೊಂದಿದೆ.


ಆ ತತ್ವ ಪ್ರತಿಪಾದಕ ಬಸವಣ್ಣ ನಿತ್ಯಸ್ಮರಣೀಯ.

-✍️ಸುಬ್ರಹ್ಮಣ್ಯ ಬಾಸ್ರಿ, ಉಡುಪಿ

Ads on article

Advertise in articles 1

advertising articles 2

Advertise under the article