-->
Cricket:ಅಂಧ ಮಹಿಳೆಯರ ಕ್ರಿಕೆಟ್ ಪಂದ್ಯಾಟ

Cricket:ಅಂಧ ಮಹಿಳೆಯರ ಕ್ರಿಕೆಟ್ ಪಂದ್ಯಾಟ

ಉಡುಪಿ, ನ.23 (ಲೋಕಬಂಧು ವಾರ್ತೆ): ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆಶ್ರಯದಲ್ಲಿ ಬೆಂಗಳೂರು ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ (ವಿಶೇಷಚೇತನರು), ಅಗ್ರಜ ಫೌಂಡೇಶನ್ ಉಡುಪಿ ಮತ್ತು ಕರ್ನಾಟಕ ಅಂಧರ ಕ್ರಿಕೆಟ್ ಅಸೋಸಿಯೇಶನ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ಅಂಧ ಮಹಿಳೆಯರ ಟಿ 10  ಕ್ರಿಕೆಟ್ ಪಂದ್ಯಾಟ ನವೆಂಬರ್ ತಿಂಗಳ 29 ಮತ್ತು 30ರಂದು ಮಣಿಪಾಲ ಮಾಹೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಾಟ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯುವ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಪ್ರತಿಭಾನ್ವಿತರನ್ನು ಗುರುತಿಸಲು ನಿರ್ಣಾಯಕ ವೇದಿಕೆಯಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಪಂದ್ಯಾಟದಲ್ಲಿ ರಾಜ್ಯದ ವಿವಿಧೆಡೆಗಳ 4 ತಂಡಗಳು ಭಾಗವಹಿಸಲಿದ್ದು, 56 ಮಂದಿ ಆಟಗಾರರು ಭಾಗವಹಿಸಲಿದ್ದಾರೆ ಎಂದರು.
ಸಮರ್ಥನಮ್ ಟ್ರಸ್ಟ್ ಸ್ಥಾಪಕ ನಿರ್ವಾಹಕ ಟ್ರಸ್ಟಿ ಡಾ. ಮಹಾಂತೇಶ್ ಜಿ. ಕಿವಾದಾಸಣ್ಣವರ್, ಮಾಹೆ ಉಪಕುಲಪತಿ ಲೆ. ಜ. ಡಾ. ಎಂ. ಡಿ. ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ. ಶರತ್ ರಾವ್ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article