Chennabasavanna: ವಚನ ಸಂಗ್ರಾಹಕ ಚೆನ್ನಬಸವಣ್ಣ
Tuesday, November 21, 2023
ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯ ಹೆಸರುಗಳಲ್ಲಿ ಚೆನ್ನಬಸವಣ್ಣ ಹೆಸರು ಪ್ರಾಮುಖ್ಯತೆಯನ್ನು ಪಡೆದಿದೆ.ಆತನ ಜೀವಿತ ಕಾಲಾವಧಿ ತೀರಾ ಕಡಿಮೆ.
ಬಸವಣ್ಣನ ಅಕ್ಕ ನಾಗಲಾಂಬಿಕೆ ಮತ್ತು ಶಿವಸ್ವಾಮಿ ದಂಪತಿಯ ಪುತ್ರನಾಗಿ ಕ್ರಿ.ಶ. 1144ರಲ್ಲಿ ಇಂಗಳೇಶ್ವರದಲ್ಲಿ ಜನಿಸಿದ ಚೆನ್ನಬಸವಣ್ಣ, 1168ರಲ್ಲಿ ಉಳವಿಯಲ್ಲಿ ಲಿಂಗೈಕ್ಯನಾದ.
ಅತ್ಯಂತ ಕಡಿಮೆ ಜೀವನಾವಧಿಯಲ್ಲಿ 1,124 ವಚನಗಳನ್ನು ರಚಿಸಿದ್ದಾನೆ.
ಕಲ್ಯಾಣ ಕ್ರಾಂತಿಯ ನಂತರ ಅನೇಕ ಸವಾಲುಗಳನ್ನು ಹಾಗೂ ಶಿವಶರಣರ ಮೇಲಿನ ದಾಳಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಚೆನ್ನಬಸವಣ್ಣ ಶರಣರ ರಕ್ಷಕನಾದ. ವಚನಗಳ ಸಂಗ್ರಹವನ್ನು ಹೊತ್ತು ಕಲ್ಯಾಣದಿಂದ ಉಳವಿಗೆ ತೆರಳಿದ.
ಚೆನ್ನಬಸವಣ್ಣನ ಸಕಾಲಿಕ ಪರಿಶ್ರಮದ ಫಲವಾಗಿ ವಚನ ಸಂಗ್ರಹ ಇಂದಿಗೂ ಉಳಿದಿದೆ.
ಚೆನ್ನಬಸವಣ್ಣ ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು. ಹನ್ನೆರಡನೆಯ ಶತಮಾನದ ಯುಗಪುರುಷನೂ ಸಾಮಾಜಿಕ ಬದಲಾವಣೆಗಳ ಹರಿಕಾರನೂ ಅಸಮಾನತೆಯ ವಿರುದ್ದ ದನಿಯೆತ್ತಿ ವ್ಯವಸ್ಠೆಯ ಆಕ್ರೋಶಕ್ಕೆ ಗುರಿಯಾದ.
ಬಸವಣ್ಣನ ಸೋದರಳಿಯನಾದರೂ ಚೆನ್ನಬಸವಣ್ಣ ಮಾತ್ರ ಸ್ವ ಸಾಮರ್ಥ್ಯ ಮತ್ತು ಸ್ವಂತ ಸಾಧನೆಗಳಿಂದ ಶ್ರೇಷ್ಠ ವ್ಯಕ್ತಿತ್ವ ಹೊಂದಿ ಪ್ರಸಿದ್ಧನಾದ, ಕನ್ನಡದ ಶ್ರೇಷ್ಠ ವಚನಕಾರ ಎಂದೂ ಚೆನ್ನಬಸವಣ್ಣ ಪರಿಗಣಿತನಾದ.