-->
ನೇಜಾರು ಪ್ರಕರಣ: ಪ್ರಚೋದನಕಾರಿ ಹೇಳಿಕೆ- ದೂರು ದಾಖಲು

ನೇಜಾರು ಪ್ರಕರಣ: ಪ್ರಚೋದನಕಾರಿ ಹೇಳಿಕೆ- ದೂರು ದಾಖಲು

ಉಡುಪಿ, ನ.20: (ಲೋಕಬಂಧು ವಾರ್ತೆ): ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಶಿವಮೊಗ್ಗದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಹಫೀಝ್ ಮುಹಮ್ಮದ್ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಇತ್ತೀಚೆಗೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಾಲ್ಕು ಕೊಲೆಗಳ ಆರೋಪಿ ಬಗ್ಗೆ `ಪ್ರಿಪರೇಶನ್ ಇಲ್ಲದೆ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡರು` ಎಂಬ ಪೋಸ್ಟ್ ಹಾಕಿದ್ದ.


ಆತ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಸಂದೇಶ ಹರಿಬಿಟ್ಟು ವಿವಿಧ ವರ್ಗಗಳ ನಡುವೆ ದ್ವೇಷ ಸೃಷ್ಟಿಸುವ ಉದ್ದೇಶ ಹೊಂದಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article