-->
Co-operative: ಐಕ್ಯತೆ ಬದ್ಧತೆ ನಿಷ್ಠೆಯಿದ್ದಲ್ಲಿ ಸಹಕಾರಿ ವ್ಯವಸ್ಥೆ ಯಶಸ್ಸು

Co-operative: ಐಕ್ಯತೆ ಬದ್ಧತೆ ನಿಷ್ಠೆಯಿದ್ದಲ್ಲಿ ಸಹಕಾರಿ ವ್ಯವಸ್ಥೆ ಯಶಸ್ಸು

ಉಡುಪಿ, ನ.17 (ಲೋಕಬಂಧು ವಾರ್ತೆ): ಐಕ್ಯತೆ, ಬದ್ಧತೆ ಮತ್ತು ಶಿಸ್ತು ಇದ್ದಲ್ಲಿ ಸಹಕಾರಿ ರಂಗ ಯಶಸ್ಸು ಗಳಿಸಲು ಸಾಧ್ಯ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ಹೇಳಿದರು.
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಉಡುಪಿ ತಾಲೂಕು ಇಂಡಸ್ಟ್ರಿಯಲ್  ಕೋ ಆಪರೇಟಿವ್ ಸೊಸೈಟಿ ಕಿನ್ನಿಮೂಲ್ಕಿ ಸಂಯುಕ್ತಾಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರಿ  ಸಪ್ತಾಹದ ಅಂಗವಾಗಿ  ಶುಕ್ರವಾರ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆದ 4ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಶಸ್ವಿ ಸಹಕಾರಿಗೆ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯಸ್ಥ ಜಯಕರ ಶೆಟ್ಟಿ ಅವರೇ ಸಾಕ್ಷಿ ಎಂದು ರಾಯಪ್ಪ ಉದಾಹರಿಸಿದರು.

ಸಹಕಾರ ಸಂಘಗಳಲ್ಲಿ  ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸುವಂತೆ ಮನವಿ ಮಾಡಿದರು.

ಅಭ್ಯಾಗತರಾಗಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ‌, ಸಹಕಾರಿ ಕ್ಷೇತ್ರದಲ್ಲಿ ಯುವ ಜನಾಂಗವನ್ನು ಸೆಳೆಯಲು ಡಿಜಿಟಲ್ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ.

ಸ್ಥಳೀಯರು ತಮ್ಮ ವ್ಯಹಾರವನ್ನು ಸಹಕಾರಿ ಬ್ಯಾಂಕಿಂಗ್ ನಲ್ಲಿ ಮಾಡುವಂತೆ ವಿನಂತಿಸಿದರು.

ಉಡುಪಿ ತಾಲೂಕು ಇಂಡಸ್ಟ್ರಿಯಲ್‌ ಕೋ - ಆಪರೇಟಿವ್ ಸೊಸೈಟಿ  ಅಧ್ಯಕ್ಷ ಅರುಣ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಹಕಾರ ಸಂಸ್ಥೆಯಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಕುರಿತು ಎಂ.ಜಿ‌.ಎಮ್  ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ  ದ.ಕ. ಸಹಕಾರಿ ಹಾಲು ಒಕ್ಕೂಟದ  ನಿರ್ದೇಶಕ ರವಿರಾಜ್ ಹೆಗ್ಡೆ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಅಲೆವೂರು ಹರೀಶ್ ಕಿಣಿ, ಶಂಕರ ಪೂಜಾರಿ ಕಟಪಾಡಿ, ಮನೋಜ್ ಕರ್ಕೇರ, ಮಟ್ಟಾರ್ ಗಣೇಶ ಕಿಣಿ, ಅಶೋಕ್ ಕುಮಾರ್ ಬಲ್ಲಾಳ್ ಮೊದಲಾದವರಿದ್ದರು.

ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ   ಸಿ.ಇ.ಒ ರಾಜೇಶ ಹೆಗ್ಡೆ ಸ್ವಾಗತಿಸಿದರು. ಪ್ರವೀಣ ಕುಮಾರ್ ಮತ್ತು ರಮೇಶ   ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ ವಂದಿಸಿದರು.

Ads on article

Advertise in articles 1

advertising articles 2

Advertise under the article