
SP: ಎಸ್.ಪಿ.ಗೆ ಅಭಿನಂದನೆ ಸಲ್ಲಿಸಿದ ನೂರ್ ಮೊಹಮ್ಮದ್
Saturday, November 18, 2023
ಉಡುಪಿ, ನ.18 (ಲೋಕಬಂಧು ವಾರ್ತೆ): ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತರ ಕುಟುಂಬದ ಯಜಮಾನ ನೂರ್ ಮೊಹಮ್ಮದ್ ಮತ್ತು ಸಂಬಂಧಿಗಳು ಶನಿವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ| ಕೆ. ಅರುಣ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಮಡದಿ ಮತ್ತು ಮಕ್ಕಳನ್ನು ಹತ್ಯೆಗೈದ ಆರೋಪಿಯನ್ನು ಶೀಘ್ರ ಪತ್ತೆಹಚ್ಚಿರುವುದಕ್ಕೆ ಧನ್ಯವಾದ ಹೇಳಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ದೀಪಾವಳಿ ಆಚರಿಸದೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಘಟನೆ ನಡೆದ ಎರಡು ದಿನದಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಉಡುಪಿ ಎಸ್.ಪಿ ವಿಶ್ವಾಸ ಮತ್ತು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.
ಬದುಕುಳಿದ ಪುತ್ರ ಅಸಾದ್ ಹೇಗೆ ಜೀವನ ಕಟ್ಟಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದ್ದು, ಊಹಾಪೋಹಗಳು ಸುಳ್ಳು ಎಂದು ಎಸ್.ಪಿ ಮಾಹಿತಿ ನೀಡಿರುವುದು ನೆಮ್ಮದಿ ತಂದಿದೆ ಎಂದರು.