ಕಾಪು, ನ.18 (
ಲೋಕಬಂಧು ವಾರ್ತೆ): ಮಣಿಪಾಲ್ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ ಮಣಿಪಾಲ್ ಮತ್ತು ರವಿ ಹಿರೇಬೆಟ್ಟು ಶನಿವಾರ ಕಾಪು ಕಡಲ ಕಿನಾರೆಯಲ್ಲಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಮರಳು ಶಿಲ್ಪ ರಚಿಸಿದರು.
ಕಡಲ ಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.