-->
Shiradipal: ಶಿರಾಡಿಪಾಲ್ ಜನ್ಮಶತಮಾನೋತ್ಸವ: ಶತನಮನ ಕಾರ್ಯಕ್ರಮ

Shiradipal: ಶಿರಾಡಿಪಾಲ್ ಜನ್ಮಶತಮಾನೋತ್ಸವ: ಶತನಮನ ಕಾರ್ಯಕ್ರಮ

ಮೂಡುಬಿದಿರೆ, ನ.16 (ಲೋಕಬಂಧು ವಾರ್ತೆ): ಸಾಹಿತಿ ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಶತನಮನ ಶತಸನ್ಮಾನ ಕಾರ್ಯಕ್ರಮದ 53 ಮತ್ತು 54ನೆಯ ಸನ್ಮಾನ ಕಾರ್ಯಕ್ರಮ ಇಲ್ಲಿನ ಗಾಂಧಿನಗರದ ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಸಂಸ್ಥೆಯಲ್ಲಿ ಸಂಸ್ಥೆ ಆಡಳಿತ ಪಾಲುದಾರ ಹಾಗೂ ಶತನಮನ ಶತಸನ್ಮಾನ ಕಾರ್ಯಕ್ರಮದ ಗೌರವ ಸಲಹೆಗಾರ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸನ್ಮಾನ ಸರಣಿಯ 53 ಮತ್ತು 54ನೇ ಸನ್ಮಾನವನ್ನು ಅನುಕ್ರಮವಾಗಿ ಜೈನ ಪ್ರೌಢಶಾಲೆಯ ಹಿಂದಿ ಶಿಕ್ಷಕ ರಾಯೀ ರಾಜಕುಮಾರ್ ಹಾಗೂ ಪಾಕಶಾಸ್ತ್ರಜ್ಞ ಅಶೋಕ್ ಭಟ್ ಪೆರಿಂಜೆ ಅವರಿಗೆ ನೀಡಿ ಗೌರವಿಸಲಾಯಿತು.

ಕೆ.ಎನ್. ಭಟ್ ಶಿರಾಡಿಪಾಲ್ ಪುತ್ರಿ ಅನುಪಮಾ ಚಿಪ್ಳೂಣಕರ್, ಅಳಿಯ ಮುರಾರಿ ಚಿಪ್ಳೂಣಕರ್, ಹಿರಿಯರಾದ ಪ್ರಭಾಕರ ರಾವ್ ದಂಪತಿ, ಧನಲಕ್ಷ್ಮೀ ಸಂಸ್ಥೆ ಪ್ರಬಂಧಕ ವೆಂಕಟೇಶ ಭಟ್ ಮೊದಲಾದವರಿದ್ದರು.

ದೀಪ್ತಿ ಬಾಲಕೃಷ್ಣ ಭಟ್ ಪ್ರಾರ್ಥಿಸಿದರು. ಶತನಮನ ಶತಸನ್ಮಾನ ಕಾರ್ಯಕ್ರಮ ಸಂಘಟಕ ಕೃಷ್ಣಕುಮಾರ್ ಸ್ವಾಗತಿಸಿ, ವಂದಿಸಿದರು.

Ads on article

Advertise in articles 1

advertising articles 2

Advertise under the article