Yakshagana: ಯಕ್ಷಪ್ರೇಮಿ ನಾರಾಯಣ ದತ್ತಿ ಪುರಸ್ಕಾರ ಪ್ರದಾನ
Thursday, November 16, 2023
ಉಡುಪಿ, ನ.16 (ಲೋಕಬಂಧು ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಡಾl ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಸಹಯೋಗದೊಂದಿಗೆ ಕಸಾಪ ಉಡುಪಿ ತಾಲೂಕು ಘಟಕ ವತಿಯಿಂದ ನೀಡುವ ಯಕ್ಷ ಪ್ರೇಮಿ ನಾರಾಯಣ ದತ್ತಿ ಪುರಸ್ಕಾರವನ್ನು ಯಕ್ಷಗಾನ ಕಲಾವಿದೆ, ಸಂಘಟಕಿ ನಿರೂಪಮ ಪ್ರಮೋದ್ ತಂತ್ರಿ ಕೊಡಂಕೂರು ಅವರಿಗೆ ಈಚೆಗೆ ನೀಡಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉರಗ ತಜ್ಞ ಗುರುರಾಜ್ ಸನಿಲ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್. ಪಿ., ಕಸಾಪ ಉಡುಪಿ ಕೋಶಾಧಿಕಾರಿ ವಿ. ಮನೋಹರ್, ಭವಾನಿ ವಿ. ಶೆಟ್ಟಿ, ಶಾರದಾ ಶೆಟ್ಟಿ, ಕಲಾ ವಿಭಾಗದ ಡೀನ್ ಡಾl ನಿಕೇತನ, ಉಪನ್ಯಾಸಕರಾದ ಪ್ರೊ. ಸೋಜನ್ ಕೆ. ಜಿ., ಎನ್ಎಸ್ಎಸ್ ಸಂಚಾಲಕಿ ವಿದ್ಯಾಕುಮಾರಿ ಇದ್ದರು.
ರಾಘವೇಂದ್ರ ಪ್ರಭು ಕರ್ವಾಲು ಪರಿಚಯಿಸಿದರು. ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು.