.jpg)
ಬಾಲಕನ ಚಿಕಿತ್ಸೆಗೆ 20 ಲಕ್ಷ ಧನ ಸಂಗ್ರಹ
Sunday, July 21, 2024
ಬಾಲಕನ ಚಿಕಿತ್ಸೆಗೆ 20 ಲಕ್ಷ ಧನ ಸಂಗ್ರಹ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಅಪ್ಲಾಸ್ಟಿಕ್ ಅನೀಮಿಯಾದಿಂದ ಬಳಲುತ್ತಿರುವ 15 ವರ್ಷದ ಬಾಲಕನಿಗೆ ಅಸ್ಥಿಮಜ್ಜೆ ಕಸಿಯೊಂದೇ ಪರಿಹಾರವಾಗಿದ್ದು, ಅದಕ್ಕೆ ಸುಮಾರು 20 ಲಕ್ಷ ಖರ್ಚು ಆಗಬಹುದೆಂದು ಚಿಕಿತ್ಸೆ ನೀಡುತ್ತಿರುವ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯರು ತಿಳಿಸಿದ್ದರು.
ಈ ಸಂದರ್ಭದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್, ಹೋಂ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥ ಡಾ. ಶಶಿಕಿರಣ್ ಶೆಟ್ಟಿ ಅವರಿಗೆ ಸಹಕರಿಸುವಂತೆ ಮನವಿ ಮಾಡಿದರು.
ಅವರು ತಮ್ಮ ಫೌಂಡೇಶನ್ ನ ಸದಸ್ಯರು ಮತ್ತು ದಾನಿಗಳ ಸಹಕಾರದೊಂದಿಗೆ 22 ದಿನದಲ್ಲಿ 20 ಲಕ್ಷ ರೂ. ಸಂಗ್ರಹಿಸಿ ಬಾಲಕನ ಕುಟುಂಬಿಕರಿಗೆ ಹಸ್ತಾಂತರಿಸಿದರು.
ನಿಧಿ ಹಸ್ತಾಂತರ ಮತ್ತು ಶುಭ ಕೋರುವ ಕಾರ್ಯಕ್ರಮ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ವಿಭಾಗದ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ಜನಾರ್ದನ ಕೊಡವೂರು ಮತ್ತು ಕೆಎಂಸಿ ಆಸ್ಪತ್ರೆ ಮಾರುಕಟ್ಟೆ ವಿಭಾಗ ಪ್ರಬಂಧಕ ಮೋಹನ ಶೆಟ್ಟಿ ಇದ್ದರು.