ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Wednesday, July 17, 2024
ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಲೋಕಬಂಧುನ್ಯೂಸ್ ಡೆಸ್ಕ್, ಕುಂದಾಪುರ
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಕಾಳಾವರ ಜನತಾ ಕಾಲೊನಿ ನಿವಾಸಿ ಹರೀಶ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಹೆಂಡತಿಯೊಂದಿಗೆ ಜಗಳ ನಡೆದು ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ಮನಸ್ತಾಪವನ್ನು ಅಲ್ಲೇ ಸರಿಪಡಿಸಲಾಗಿತ್ತು.
ಠಾಣೆಯಿಂದ ರಿಕ್ಷಾದಲ್ಲಿ ಬರುವಾಗ ಹೊಳೆ ಹತ್ತಿರ ನಿಲ್ಲಿಸಿ ಸೇತುವೆ ಮೇಲಿಂದ ನದಿಗೆ ಹರೀಶ್ ಹಾರಿದರು ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.