ಶಿವಪಾಡಿಗೆ ಸಂಸದ ಚೌಟ ಭೇಟಿ
Tuesday, July 16, 2024
ಶಿವಪಾಡಿಗೆ ಸಂಸದ ಚೌಟ ಭೇಟಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೋಮವಾರ ಸರಳೇಬೆಟ್ಟು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.
ಅನ್ನ ಸಂತರ್ಪಣೆ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್, ಶುಭಕರ ಸಾಮಂತ್, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಪ್ರಭು, ಟ್ರಸ್ಟಿಗಳಾದ ಸತೀಶ್ ಪಾಟೀಲ್, ಮಂಗಳೂರು ಬಿಜೆಪಿ ಕೋಶಾಧಿಕಾರಿ ಸಂಜಯ್ ಪ್ರಭು, ದೇವಸ್ಥಾನದ ಕೋಶಾಧಿಕಾರಿ ಶ್ರೀಕಾಂತ್ ಪ್ರಭು ಮೊದಲಾದವರಿದ್ದರು.