ಚೆನ್ನೈ ಟಿ. ನಗರದಲ್ಲಿ ಪೇಜಾವರಶ್ರೀ ಚಾತುರ್ಮಾಸ್ಯ
Sunday, July 21, 2024
ಚೆನ್ನೈ ಟಿ. ನಗರದಲ್ಲಿ ಪೇಜಾವರಶ್ರೀ ಚಾತುರ್ಮಾಸ್ಯ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ಚೆನ್ನೈ ಟಿ.ನಗರದ ಪೇಜಾವರ ಮಠದಲ್ಲಿ ತಮ್ಮ 37ನೆಯ ಚಾತುರ್ಮಾಸ್ಯ ವ್ರತ ಸಂಕಲ್ಪಿಸಿದರು.
ಬ್ರಹ್ಮಚಾರಿಗಳು, ಗೃಹಸ್ಥರು ಮತ್ತು ಯತಿಗಳು ಒಟ್ಟಾಗಿ ವಿಶೇಷವಾಗಿ ದೇವರ ಸೇವೆ, ದೇಶ ಸೇವೆ ಮಾಡಬೇಕೆಂದು ಶ್ರೀಪಾದರು ನೆರೆದ ಭಕ್ತರಿಗೆ ಕಿವಿಮಾತು ಹೇಳಿದರು.
ಪ್ರತಿನಿತ್ಯದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಭಕ್ತರಿಗೆ ತಿಳಿಸಿ, ಅನುಗ್ರಹಿಸಿದರು.