ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆಶ್ರಯದ ಸೌಹಾರ್ದ ಸಮಿತಿ ಶನಿವಾರ ಉದ್ಯಾವರ ಪರಿಸರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಸೌಹಾರ್ದತೆ ಮೆರೆದರು.
ಚರ್ಚಿನ ಪ್ರಧಾನ ಧರ್ಮಗುರು ಫಾ. ಅನಿಲ್ ಡಿ'ಸೋಜ ಮಾತನಾಡಿ, ವಿಘ್ನ ನಿವಾರಕ ಗಣಪತಿ ಎಲ್ಲರ ಕಷ್ಟಗಳನ್ನು ನಿವಾರಿಸಿ ಶಾಂತಿ, ನೆಮ್ಮದಿ ನೀಡಲಿ. ಗಣೇಶೋತ್ಸವದಂಥ ಕಾರ್ಯಕ್ರಮಗಳು ಸೌಹಾರ್ದತೆಗೆ ಇನ್ನಷ್ಟು ಪ್ರೇರಣೆಯಾಗಲಿ ಎಂದರು.
ಫ್ರೆಂಡ್ಸ್ ಗಾರ್ಡನ್ ಆರೂರು ತೋಟ ಸಂಪಿಗೆನಗರ ನೇತೃತ್ವದ ಬಾಲ ಗಣೇಶೋತ್ಸವ ಸಮಿತಿ, ಉದ್ಯಾವರ ಯುವಕ ಮಂಡಲ ನೇತೃತ್ವದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಂಗಮ ಸಾಂಸ್ಕೃತಿಕ ವೇದಿಕೆಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸೌಹಾರ್ದ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವo. ಸ್ಟೀಫನ್ ರೋಡ್ರಿಗಸ್, ಸೌಹಾರ್ದ ಸಮಿತಿ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್, ಪ್ರತಾಪ್ ಕುಮಾರ್ ಉದ್ಯಾವರ, ರಿಯಾಜ್ ಪಳ್ಳಿ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಲಾರೆನ್ಸ್ ಡೆಸಾ, ಜೆರಾಲ್ಡ್ ಪಿರೇರ, ವಿಲ್ಫ್ರೆಡ್ ಡಿ'ಸೋಜ, ಪ್ರಿತೇಶ್ ಪಿಂಟೊ, ಮೆಲ್ವಿನ್ ನೋರೊನ್ಹಾ, ಸ್ಟೀವನ್ ಲೂವಿಸ್, ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರಾದ ಜಿತೇಂದ್ರ ಶೆಟ್ಟಿ, ದಿನೇಶ್ ಜತ್ತನ್ನ, ಯೋಗೀಶ್ ಕೋಟ್ಯಾನ್, ಲಕ್ಷ್ಮಣ್ ಸನಿಲ್, ಗಣೇಶ್ ಕುಮಾರ್, ಅಶೋಕ್ ಭಂಡಾರಿ, ವೆಂಕಟ್ ಬಂಗೇರ, ರಮಾನಂದ ಸೇರಿಗಾರ್, ಸನಿಮ್, ಆಲ್ವಿನ್ ಅಂದ್ರಾದೆ, ಪ್ರಸಾದ್ ಪೂಜಾರಿ, ಚೇತನ್ ಕುಮಾರ್, ಸುಹೇಲ್ ಅಬ್ಬಾಸ್, ಸ್ಟೀವನ್ ಕುಲಾಸೊ ಮೊದಲಾದವರಿದ್ದರು.
