ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿಗೆ ಮೊಹಮ್ಮದ್ ಶರೀಫ್

ಲೋಕಬಂಧು ನ್ಯೂಸ್, ಕಾರ್ಕಳ
ಚಿರಾಯು ಕನ್ನಡ ಟಿವಿ, ನೆನಪು ಫೌಂಡೇಶನ್ ಕರ್ನಾಟಕ ವತಿಯಿಂದ ನಡೆಯುವ ರಾಷ್ಟ್ರ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾದ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಸಮಾಜ ಸೇವಕ  ಮೊಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಕನ್ನಡ ನಾಡು–ನುಡಿ, ಸಂಸ್ಕೃತಿ, ಸಾಹಿತ್ಯ, ಮಾಧ್ಯಮ, ಶಿಕ್ಷಣ, ಧಾರ್ಮಿಕ, ಕಲೆ ಹಾಗೂ ಸಮಾಜ ಸೇವೆ ಇತ್ಯಾದಿಗಳಲ್ಲಿ ತೊಡಗಿಕೊಂಡಿರುವ ಶರೀಫ್ ಅವರಿಗೆ ಡಿ.14ರಂದು ಗೋವಾದ ಮಡಗಾಂವ್ ರವೀಂದ್ರ ಭವನದಲ್ಲಿ‌ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚಿರಾಯು ಕನ್ನಡ ಟಿವಿ ಸಂಸ್ಥಾಪಕ ಡಾ. ಮಂಜುನಾಥ್ ಶಿವಕ್ಕ ತಿಳಿಸಿದ್ದಾರೆ.


ಕಾರ್ಯಕ್ರಮದಲ್ಲಿ ಮಹಲ್ ರೋಜ್'ನ ಶ್ರೀ ಮಲ್ಲಿಕಾರ್ಜುನ ಅಪ್ಪಾಜಿ, ಹೊನ್ನಾಪುರ ಕಣವಿಯ ಶ್ರೀ ಡಾ.ವಿದ್ಯಾನಂದ ಮಹಾಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಇಲಿಯಾಸ್ ಇಬ್ರಾಹಿಂ ಸಾಬ, ಕಲ್ಬುರ್ಗಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕಿ ಡಾ. ಅನಿತಾ ಆರ್., ಉದ್ಯಮಿ ವೈ.ಎನ್. ಪಲ್ಲೇದ, ದಕ್ಷಿಣ ಗೋವಾ ಸಾಲಸೆಟ್ ತಾಲೂಕು ಕ.ಸಾ.ಪ.  ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಸಾಮಾಜಿಕ ಹೋರಾಟಗಾರ್ತಿ ಪುಷ್ಪಾ ರಾಮಚಂದ್ರ ಕರಿಭೀಮಗೋಳ, ಬೆಂಗಳೂರಿನ ಸಾಹಿತಿ  ಡಾ. ಮಂಜುಳಾ ಶಂಕರ ಶಿರೂರ, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕಿ ಚೇತನ ಶಿವಕುಮಾ‌ರ್ ಸಿಂಧನೂರು, ಸಾಹಿತ್ಯ ಸಾಂಸ್ಕೃತಿಕ ಹಾಗೂ ಭಾರತ್ ಸೈಟ್ ಗೈಡ್ಸ್ ಸಂಘಟನೆ ಮುಖ್ಯಸ್ಥ ಬೀರಪ್ಪ ಶಂಭೋಜಿ, ಲೇಖಕಿ ಮತ್ತು ಛಾಯಾಗ್ರಾಹಕಿ ಕವಿತಾ ಗೋಪಾಲ್ ಚಿಕ್ಕಮಗಳೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ಶಿಕ್ಷಿ ರೀಟಾ ಎಮ್. ಡಿ'ಸೋಜಾ, ಹುಬ್ಬಳ್ಳಿ ಐ.ಬಿ.ಎಂ.ಆರ್. ಶಿಕ್ಷಣ ಸಂಸ್ಥೆ ಮುಖ್ಯಸ್ಥ ವಿ.ಜಿ.ಪಾಟೀಲ್, ಹುಬ್ಬಳ್ಳಿ ಶ್ರೇಯಾ ಜನಸೇವಾ ಫೌಂಡೇಶನ್ ಟ್ರಸ್ಟ್ ರಾಜ್ಯಾದ್ಯಕ್ಷ ಡಾ.ಆರ್. ನಾರಾಯಣಸ್ವಾಮಿ, ರಿಪಬ್ಲಿಕ್ ಕನ್ನಡ ಟಿ.ವಿ. ದಾವಣಗೆರೆ ಜಿಲ್ಲಾ ವರದಿಗಾರ ವಿಠಲ ಕ್ಯಾರವಾಡ, ಹಿರಿಯ ಪತ್ರಕರ್ತ ಚಿಗಟೇರಿ ಕೋಟ್ರೇಶಿ ಕೊಟ್ಟೂರು ಭಾಗವಹಿಸುವರು.