
ಒಂದೇ ವರ್ಷದಲ್ಲಿ 25 ಹುಲಿ ನಾಪತ್ತೆ
Thursday, November 7, 2024
ಲೋಕಬಂಧು ನ್ಯೂಸ್, ಜೈಪುರ
ಅವುಗಳಲ್ಲಿ 11 ಹುಲಿಗಳು ಒಂದು ವರ್ಷದಿಂದ ನಾಪತ್ತೆಯಾಗಿವೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ.
ವ್ಯಾಘ್ರಗಳ ಪತ್ತೆಗೆ ವನ್ಯಜೀವಿ ಇಲಾಖೆ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ದಾಖಲೆಗಳ ಪರಿಶೀಲನೆ ಜೊತೆಗೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಕುರಿತು ಶಿಫಾರಸು ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವರ್ಷದಲ್ಲಿ 25 ಹುಲಿಗಳು ನಾಪತ್ತೆಯಾಗಿರುವುದು ಇದೇ ಮೊದಲು. ಈ ಹಿಂದೆ ಇದೇ ರಾಷ್ಟ್ರೀಯ ಉದ್ಯಾನದಲ್ಲಿ 2019ರಿಂದ 2022ರ ವರೆಗೆ 13 ಹುಲಿಗಳು ಕಾಣೆಯಾಗಿದ್ದ ಬಗ್ಗೆ ವರದಿಯಾಗಿತ್ತು.