-->
ಪೊಲೀಸರ ಅನುಮತಿ ನಿರಾಕರಿಸಿ ಪ್ರತಿಭಟಿಸಿದವರ ವಿರುದ್ಧ ದೂರು ದಾಖಲು

ಪೊಲೀಸರ ಅನುಮತಿ ನಿರಾಕರಿಸಿ ಪ್ರತಿಭಟಿಸಿದವರ ವಿರುದ್ಧ ದೂರು ದಾಖಲು

ಲೋಕಬಂಧು ನ್ಯೂಸ್, ಮಂಗಳೂರು
ಪ್ಯಾಲೆಸ್ತೈನ್ ದಾಳಿ ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಗೆ ಪೊಲೀಸರ ಪೂರ್ವಾನುಮತಿ ನಿರಾಕರಣೆ ಉಲ್ಲಂಘಿಸಿ ಪ್ರತಿಭಟಿಸಿದ 11ಮಂದಿ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಗೇಶ್‌ ಕೋಟ್ಯಾನ್‌, ವಸಂತ ಆಚಾರಿ, ಯಾದವ ಶೆಟ್ಟಿ, ಸಂತೋಷ್‌ ಬಜಾಲ್‌, ಸುಕುಮಾರ್‌, ಇಮ್ತಿಯಾಜ್‌, ಮುನೀರ್‌ ಕಾಟಿಪಳ್ಳ, ಸುನಿಲ್‌ ಕುಮಾರ್‌ ಬಜಾಲ್‌, ಯೋಗೀಶ್‌, ಹಯವದನ ರಾವ್‌ ಮತ್ತು ಸೀತಾರಾಮ ಬೇರಿಂಜ ವಿರುದ್ಧ ಪ್ರಕರಣ ದಾಖಲಾಗಿದೆ.


ಪ್ಯಾಲೆಸ್ತೈನ್‌ನಲ್ಲಿ ಇಸ್ರೇಲ್‌ ನಡೆಸಿದ ನರಹತ್ಯೆ ಖಂಡಿಸಿ, ಕದನ ವಿರಾಮ ನಡೆಸಿ ಗಾಝಾದ ಮರುನಿರ್ಮಾಣ ಹಾಗೂ ಮಾನವೀಯ ನೆರವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಕ್ಲಾಕ್‌ ಟವರ್‌ ಬಳಿ ಸಿಪಿಐ (ಎಂ) ಮತ್ತು ಸಿಪಿಐ ಪಕ್ಷದ ವತಿಯಿಂದ ನ. 4ರಂದು ಪ್ರತಿಭಟನೆ ನಡೆಸಿದ್ದರು.


ಆದರೆ, ಪೊಲೀಸ್‌ ಇಲಾಖೆ ಪ್ರತಿಭಟನೆಗೆ ಅನುಮತಿ ನಿರಾಕರಿಸಿ, ಪ್ರತಿಭಟನೆ ನಡೆಸದಂತೆ ಸೂಚನೆ ನೀಡಿತ್ತು.


ಅದನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಿರುವ ವಿರುದ್ಧ ಎಎಸ್‌ಐ ಪ್ರವೀಣ್‌ ಕೆ. ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article