-->
ಸರಕಾರಿ ದಾಖಲೆಯಲ್ಲಿ ಸುಲ್ತಾನಪುರ ನಮೂದಾಗಿಲ್ಲ

ಸರಕಾರಿ ದಾಖಲೆಯಲ್ಲಿ ಸುಲ್ತಾನಪುರ ನಮೂದಾಗಿಲ್ಲ

ಲೋಕಬಂಧು ನ್ಯೂಸ್, ಉಡುಪಿ
ದಿಶಾಂಕ್ ಆ್ಯಪ್ ನಲ್ಲಿ ಶಿವಳ್ಳಿ ಗ್ರಾಮ ಸುಲ್ತಾನಪುರ ಎಂದು ನಮೂದಾಗಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸ್ಪಷ್ಟನೆ ನೀಡಿದ್ದು ಸರಕಾರಿ ದಾಖಲೆಯಲ್ಲಿ ಆ ಹೆಸರಿಲ್ಲ. ಯಾರೂ ಆತಂಕಪಡಬೇಕಾಗಿಲ್ಲ ಎಂದಿದ್ದಾರೆ.
ಶಿವಳ್ಳಿ ಗ್ರಾಮ ನಕಾಶೆಯಲ್ಲಿ ಸುಲ್ತಾನಪುರ ಎಂದಿಲ್ಲ. ಗ್ರಾಮ ನಕಾಶೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು.
ಕಂದಾಯ ಅಥವಾ ಭೂಮಾಪನ ಇಲಾಖೆ ದಾಖಲೆಗಳಲ್ಲಿ ಸುಲ್ತಾನಪುರ ಎಂದು ಉಲ್ಲೇಖವಾಗಿಲ್ಲ. ಸರ್ವೇ ನಂಬರ್ 120ರ ಆರ್.ಟಿ.ಸಿ.ಯಲ್ಲೂ ಈ ರೀತಿಯ ಯಾವುದೇ ಉಲ್ಲೇಖವಿಲ್ಲ.


ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article