
ಹೆಬ್ಬಾರ್ ದಂಪತಿಗೆ ಕಸಾಪ ಗೌರವ
Sunday, November 3, 2024
ಲೋಕಬಂಧು ನ್ಯೂಸ್, ಕುಂದಾಪುರ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆಯಲ್ಲಿ ಕುಂದಾಪುರ ತಾಲೂಕು ಘಟಕ ನೇತೃತ್ವದಲ್ಲಿ ನಡೆದ ಅಸೀಮ 2024 ಕಾರ್ಯಕ್ರಮದಲ್ಲಿ ಎ.ಎಸ್. ಎನ್.ಹೆಬ್ಬಾರ್ ದಂಪತಿಗೆ ಕಸಾಪ ಉಡುಪಿ ತಾಲೂಕು ಘಟಕ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ಘಟಕಾಧ್ಯಕ್ಷ ರವಿರಾಜ್ ಎಚ್ ಪಿ., ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಮತ್ತು ರಂಜನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸದಸ್ಯರಾದ ದೀಪಾ ಕರ್ಕಿ, ಸಿದ್ಧಬಸಯ್ಯ ಸ್ವಾಮಿ ಮಠ, ವಸಂತ್, ಸತೀಶ್ ಕೊಡವೂರು, ಪತ್ರಕರ್ತ ಅರುಣ್ ಶಿರೂರು, ಬ್ರಹ್ಮಾವರ ತಾಲೂಕು ಘಟಕಾಧ್ಯಕ್ಷ ರಾಮಚಂದ್ರ ಐತಾಳ್ , ಬೈಂದೂರು ಘಟಕಾಧ್ಯಕ್ಷ ಡಾ. ರಾಘು ನಾಯ್ಕ್ ಇದ್ದರು.