
ಆತ್ಮೀಯ ಸನ್ಮಾನ
Friday, February 28, 2025
ಲೋಕಬಂಧು ನ್ಯೂಸ್
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ತೃತೀಯ ಪರ್ಯಾಯ ಕಾಲದಲ್ಲಿ ಪರಸ್ಪರ ಸಹಕಾರ ನೀಡಿದ್ದ ಜೊತೆಗೆ ಸದಾ ಬೆಂಬಲ ನೀಡಿದ್ದ ದ್ವಂದ್ವ ಮಠದಂತಿದ್ದ ಶ್ರೀ ರಘುಮಾನ್ಯರು ಸದಾ ಸ್ಪೂರ್ತಿದಾಯಕ ವ್ಯಕ್ತಿತ್ವ ದವರಾಗಿದ್ದರು ಎಂದು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸ್ಮರಿಸಿದರು.
ಆರಾಧನಾ ಪರ್ವಕಾಲದಲ್ಲಿ ಅವರ ಜೊತೆಗೆ ಅತ್ಯಂತ ಆತ್ಮೀಯರಾಗಿ ಗುರುತಿಸಿಕೊಂಡಿದ್ದ ಸಹೋದರರೂ ಅನುಭವಸ್ಥ ಆಡಳಿತಗಾರರೂ ಆಗಿದ್ದ ದೇವರಾಜಾಚಾರ್ಯ, ವೆಂಕಟೇಶಾಚಾರ್ಯ, ಅನಂತ ಕೃಷ್ಣಾಚಾರ್ಯ (ದಿ. ಶ್ರೀಪತಿ ಆಚಾರ್ಯರ ಪುತ್ರ) ಮತ್ತು ಗುರುಮೂರ್ತಿ ಆಚಾರ್ಯ (ದಿ.ವಾದಿರಾಜಾಚಾರ್ಯರ ಪುತ್ರ) ಅವರನ್ನು ಸನ್ಮಾನಿಸಿದರು.