-->
ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣ ಅವಕಾಶ

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣ ಅವಕಾಶ

ಲೋಕಬಂಧು ನ್ಯೂಸ್
ಕಾರ್ಕಳ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮದ ಭಾಗವಾಗಿ ಹಲವಾರು ವರ್ಷಗಳಿಂದ 5ರಿಂದ 10ನೇ ತರಗತಿ ವರೆಗೆ ಪ್ರತೀ ತರಗತಿಗೆ ಐವರು ವಿದ್ಯಾರ್ಥಿಗಳಂತೆ ಉಚಿತ ಶಿಕ್ಷಣವನ್ನು ಕಾರ್ಕಳ ತಾಲೂಕಿನ ಬಡ ಅರ್ಹ ಮಕ್ಕಳಿಗೆ ನೀಡಲಾಗುತ್ತಿದ್ದು, ಕಳೆದ ಶೈಕ್ಷಣಿಕ ವರ್ಷದಿಂದ ಈ ಉಚಿತ ಶಿಕ್ಷಣವನ್ನು ಕಾಲೇಜು ವಿಭಾಗದ ವಾಣಿಜ್ಯ ವಿಭಾಗಕ್ಕೂ ವಿಸ್ತರಿಸಲಾಗಿದೆ.ಪ್ರಸ್ತುತ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಇಕೋನಾಮಿಕ್ಸ್, ಬಿಸಿನೆಸ್ ಸ್ಟಡೀಸ್, ಎಕೌಂಟೆನ್ಸಿ ಮತ್ತು ಸ್ಟ್ಯಾಟಿಸ್ಟಿಕ್ಸ್ ಅಥವಾ ಇಕೋನಾಮಿಕ್ಸ್, ಬಿಸಿನೆಸ್ ಸ್ಟಡಿಸ್, ಎಕೌಂಟೆನ್ಸಿ ಮತ್ತು  ಕಂಪ್ಯೂಟರ್ ಸೈನ್ಸ್  ಸಂಯೋಜನೆಯೊಂದಿಗೆ ಸಿ.ಎ. ಫೌಂಡೇಶನ್, ಸಿ.ಎಸ್.ಇ.ಇ.ಟಿ ತರಗತಿಗಳು ನಡೆಯುತ್ತಿದೆ. ಜೊತೆಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ ಶಿಕ್ಷಣ ತರಬೇತಿ ನೀಡಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಕಾನೂನು ವಿದ್ಯಾಲಯಗಳ ಪ್ರವೇಶಕ್ಕಾಗಿ ನಡೆಯುವ ಕ್ಲಾಟ್ ಪರೀಕ್ಷಾ ತರಬೇತಿಯೂ ಪ್ರಾರಂಭಗೊಳ್ಳಲಿದೆ.


ಉಚಿತ ಶಿಕ್ಷಣ
2025-26ನೇ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಬಯಸುವ 10ನೇ ತರಗತಿಯಲ್ಲಿ ಶೇ.95ಕ್ಕಿಂತ  ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು  ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣ, ಶೇ. 90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ. 85ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ.


ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ, ಮಾಹಿತಿ ಪಡೆದುಕೊಳ್ಳಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ 7259500911 ಅಥವಾ 8147454906ನ್ನು ಸಂಪರ್ಕಿಸಬಹುದು.


ಪಠ್ಯ ಹಾಗೂ ಪಠ್ಯೇತರ ಸಾಧನೆ
ಸಂಸ್ಥೆಯಲ್ಲಿ ಅತ್ಯುತ್ತಮ ರೀತಿಯ ಸಿ.ಎ. ಫೌಂಡೇಶನ್ ತರಗತಿ ನಡೆಯುತ್ತಿದ್ದು, ಈಗಾಗಲೇ 35 ಮಂದಿ ವಿದ್ಯಾರ್ಥಿಗಳು ಸಿ.ಪಿ.ಟಿ ಹಾಗೂ 15‌ ಮಂದಿ ವಿದ್ಯಾರ್ಥಿಗಳು ಸಿ.ಎ. ಫೌಂಡೇಶನ್'ನಲ್ಲಿ ಉತ್ತೀರ್ಣರಾಗಿದ್ದಾರೆ.


ಸಿ.ಎ ಅಂತಿಮ ಪರೀಕ್ಷೆಯಲ್ಲಿ 14 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರಸ್ತುತ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರ ಜೂನ್ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಸಾತ್ವಿಕ್ ಪ್ರಭು 400ರಲ್ಲಿ 342 ಅಂಕ ಪಡೆದಿದ್ದು, 2017ರ ಜೂನ್ ಸಿ.ಪಿ.ಟಿ ಪರೀಕ್ಷೆಯಲ್ಲಿ ಕೇದಾರನಾಥ ವಿ. ಕಾಮತ್ 200ಕ್ಕೆ 188 ಅಂಕ ಗಳಿಸಿದ್ದಾರೆ.


ಸಂಸ್ಥೆಯ ವಾಣಿಜ್ಯ ವಿಭಾಗದ  ದ್ವಿತೀಯ ಪಿ.ಯು.ಸಿ ಪರೀಕ್ಷಾ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವಾರು ರ್ಯಾಂಕ್ ಪಡೆದಿದ್ದು, 2016ರಲ್ಲಿ ರಕ್ಷಾ ಶೆಣೈ 594 ಅಂಕ ಗಳಿಸಿ ರಾಜ್ಯಕ್ಕೆ 2ನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. 2019ರ ಫಲಿತಾಂಶದಲ್ಲಿ ಋತಿಕಾ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನಿಯಾಗಿಯೂ, ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿಯೂ, 2021ರಲ್ಲಿ ಛಾಯಾ ಸಿ. ಪೈ ರಾಜ್ಯಕ್ಕೆ 3ನೇ ಸ್ಥಾನಿಯಾಗಿ, ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ, 2023ರಲ್ಲಿ ಶರಣ್ಯಾ ಎಸ್. ಹೆಗ್ಡೆ ಮತ್ತು ಮಾನ್ಯ ಜೈನ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನಿಯಾಗಿಯೂ, 2023ರಲ್ಲಿ ಚೈತ್ರಾ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿರುವ ಜೊತೆಗೆ ಒಟ್ಟು 5 ಮಂದಿ ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.


ಈ ಬಾರಿ 2025ರ ಜನವರಿಯಲ್ಲಿ ನಡೆದ ಸಿ.ಎಸ್.ಇ.ಇ.ಟಿ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ.


ಪಠ್ಯೇತರ ಚಟುವಟಿಕೆಯಲ್ಲಿ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಕಾರ್ಯಾಚರಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಿ ಈಗಾಗಲೇ ಋತಿಕಾ ಕಾಮತ್, ವೃದ್ಧಿ ಶೆಟ್ಟಿ ಮತ್ತು ಸಮಿಯಾ ಹೆಗ್ಡೆ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.


ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಬಾಸ್ಕೆಟ್ ಬಾಲ್, ತ್ರೋಬಾಲ್, ವಾಲಿಬಾಲ್, ಶಟ್ಲ್ ಬ್ಯಾಡ್ಮಿಂಟನ್, ಫೂಟ್ಬಾಲ್ ಮತ್ತು ಅಥ್ಲೆಟಿಕ್ಸ್ ತರಬೇತಿ ಪಡೆದು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ.


ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸಲು ವ್ಯಾಪಾರ ಮೇಳ ಹಾಗೂ ಕೈಗಾರಿಕಾ ಭೇಟಿ ಆಯೋಜಿಸಲಾಗುತ್ತಿದೆ. 

Ads on article

Advertise in articles 1

advertising articles 2

Advertise under the article