-->
ದೆಹಲಿಗೆ ಮಹಿಳಾ ಸಿಎಂ: ಸಂಭ್ರಮಾಚರಣೆ

ದೆಹಲಿಗೆ ಮಹಿಳಾ ಸಿಎಂ: ಸಂಭ್ರಮಾಚರಣೆ

ಲೋಕಬಂಧು ನ್ಯೂಸ್
ಉಡುಪಿ, ಫೆ.21: ರೇಖಾ ಗುಪ್ತಾ ಅವರು ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿ ಬಳಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಮಾತನಾಡಿ, ಸುದೀರ್ಘ 27 ವರ್ಷಗಳ ಬಳಿಕ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ, ಮೊದಲ ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ ಮಹಿಳಾ ಶಾಸಕಿ ರೇಖಾ ಗುಪ್ತಾ ಅವರನ್ನು ರಾಷ್ಟ್ರ ರಾಜಧಾನಿಯ ಗದ್ದುಗೆಗೆ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ.


ದೆಹಲಿಯ ಮುಖ್ಯಮಂತ್ರಿ ಗಾದಿಗೆ ಅನೇಕ ಮಂದಿ ಘಟಾನುಘಟಿ ಶಾಸಕರು ಸಮರ್ಥರಾಗಿದ್ದರೂ ಪಕ್ಷದ ಓರ್ವ ನೂತನ ಮಹಿಳಾ ಶಾಸಕಿಗೆ ದೆಹಲಿಯ ಆಡಳಿತ ಚುಕ್ಕಾಣಿ ಹಿಡಿಯುವ ಅವಕಾಶ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತುನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ಪ್ರಮುಖರು ಅಭಿನಂದನಾರ್ಹರು ಎಂದರು.


ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸುಜಲಾ ಸತೀಶ್, ತಾರಾ ಆಚಾರ್ಯ, ವಿದ್ಯಾ ಶ್ಯಾಮ್, ಸುಮಾ ಆರ್.ಕುಮಾರ್, ಲೀಲಾ ಆರ್. ಆಮೀನ್, ಕವಿತಾ ಪೂಜಾರಿ, ಲೀನಾ, ಉಡುಪಿ ನಗರ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸುಧಾ ಪೈ, ಯಶೋಧಾ ರಾಜೇಂದ್ರ, ಸರೋಜಾ ಶೆಣೈ, ಆಶಾಲತಾ ಹೆಗ್ಡೆ, ದೀಪಾ ಪೈ, ಪ್ರಜ್ಞಾ ಶೆಟ್ಟಿ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article