
ಟಾಂಗ್ ಕೊಡಲು ಹೋಗಿ ಪೇಚಿಗೆ ಸಿಲುಕಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ!
Saturday, March 22, 2025
ಲೋಕಬಂಧು ನ್ಯೂಸ್
ಉಡುಪಿ: ಮಲ್ಪೆಯಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿದ ಪ್ರಕರಣದಲ್ಲಿ ಬಂಧಿಸಿರುವ ಮೀನುಗಾರರನ್ನು ಬಿಡುಗಡೆ ಮಾಡಬೇಕೆಂದು ಶನಿವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸತ್ಯಾಂಶ ಮಾತನಾಡಿದ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರನ್ನು ಟೀಕಿಸಲು ಹೋಗಿ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಪೇಚಿಗೆ ಸಿಲುಕಿದ ಘಟನೆ ನಡೆಯಿತು.
ಪ್ರಮೋದ್ ಮಧ್ವರಾಜ್ ಮಾತನಾಡಿದ ಬಳಿಕ ಸಂಘಟಕರು ರಮೇಶ್ ಕಾಂಚನ್ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು.
ಈ ವೇಳೆ ರಮೇಶ್ ಕಾಂಚನ್ 2018ರ ಘಟನೆಯೊಂದನ್ನು ನೆನೆಪಿಸಿ ಪ್ರಮೋದ್ ಮಧ್ವರಾಜ್ ಅವರನ್ನು ಟೀಕಿಸಲು ಆರಂಭಿಸಿದಾಗ ರಾಜಕೀಯ ಭಾಷಣ ಮಾಡದಂತೆ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಮೀನುಗಾರ ಮಹಿಳೆಯರು ಜೈಲಿನಲ್ಲಿದ್ದಾರೆ. ಈ ವೇಳೆ ರಾಜಕೀಯ ಮಾತನಾಡಬೇಡಿ ಎಂದು ಪ್ರತಿಭಟನಾಕಾರರು ವೇದಿಕೆಯತ್ತ ನುಗ್ಗಲು ಯತ್ನಿಸಿದರು.
ಆದರೂ ಭಾಷಣ ನಿಲ್ಲಿಸದೇ ರಮೇಶ್ ಕಾಂಚನ್ ಮಾತನಾಡುತ್ತಿದ್ದಾಗ ಮೀನುಗಾರರು ಮೈಕ್ ಎಳೆದು ಆಕ್ರೋಶ ಹೊರಹಾಕಿದರು.
ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಶಾಸಕ ಯಶಪಾಲ್ ಸುವರ್ಣ ಸೇರಿದಂತೆ ಹಿರಿಯ ಮುಖಂಡರು ಪ್ರತಿಭಟನಾಕಾರರನ್ನು ತಡೆಯಲು ಹರಸಾಹಸಪಟ್ಟರು.
ಕೊನೆಯಲ್ಲಿ ಮೀನುಗಾರ ಮುಖಂಡರೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕಳುಹಿಸಿಕೊಟ್ಟರು