.jpg)
ಸಮಕಾಲೀನತೆಯ ಸ್ಪರ್ಷವಾದಾಗ ಕಲೆಯಲ್ಲಿ ಹೊಸ ಗಾಳಿ
Monday, March 3, 2025
ಲೋಕಬಂಧು ನ್ಯೂಸ್
ಉಡುಪಿ: ಶಾಸ್ತ್ರೀಯತೆಗೆ ಸಮಕಾಲೀನತೆಯ ಸ್ಪರ್ಷವಾದಾಗ ನೃತ್ಯವೂ ಸೇರಿದಂತೆ ಎಲ್ಲಾ ಕಲೆಗಳಲ್ಲಿ ಹೊಸ ಗಾಳಿ ಬೀಸಲು ಸಾಧ್ಯ ಎಂದು ಖ್ಯಾತ ನೃತ್ಯ ಕಲಾವಿದೆ ನೃತ್ಯ ವಿನ್ಯಾಸಗಾರ್ತಿ ಮಧು ನಟರಾಜ್ ಹೇಳಿದ್ದಾರೆ.
ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆಯೂ ಅಗಿರುವ ಮಧು ನಟರಾಜ್ ಶಾಸ್ತ್ರೀಯ ನೃತ್ಯದ ಪಠ್ಯಗಳು ಮತ್ತು ತಂತ್ರಗಳ ಪುನರ್ ವ್ಯಾಖ್ಯಾನ ಹಾಗೂ ನವೀಕರಣಕ್ಕೆ ಒಳಗಾದಾಗ ಅವು ಸಮಕಾಲೀನವೂ ಜನರಿಗೆ ಹತ್ತಿರವೂ ಆಗುತ್ತವೆ ಎಂದರು.
ವಿಡಿಯೋ ಮೂಲಕ ತಮ್ಮ ವಿವಿಧ ಪ್ರಯೋಗಗಳನ್ನು ವಿವರಿಸಿದ ಅವರು ಮುಖ್ಯವಾಗಿ ಪ್ರಕೃತಿ, ಸ್ತ್ರೀ, ಪರಿಸರ ಸಂಬಂಧಿ ವಿಷಯಗಳನ್ನು ನೃತ್ಯ ರೂಪದಲ್ಲಿ ಜನರಿಗೆ ತಲುಪಿಸುವ ಪ್ರಯತ್ನಗಳನ್ನು ಒತ್ತಿಹೇಳಿದರು.
ಕಲಾವಿದೆಯರಾದ ರಮ್ಯಾ ನಾಗರಾಜ್ ಹಾಗೂ ಡಾ. ಭ್ರಮರಿ ಶಿವಪ್ರಕಾಶ್ ಪ್ರಾತ್ಯಕ್ಷಿಕೆ ಮೂಲಕ ಶಾಸ್ತ್ರೀಯ ನೃತ್ಯ ಪ್ರಕಾರಗಳ ಹೋಲಿಕೆ ಮತ್ತು ಭಿನ್ನತೆಗಳನ್ನು ಮಧು ನಟರಾಜ್ ವಿವರಿಸಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಸಂವಾದ ನಡೆಸಿಕೊಟ್ಟರು.