
ವಿಶೇಷ ತಪಾಸಣೆ ಶಿಬಿರ
Monday, March 3, 2025
ಲೋಕಬಂಧು ನ್ಯೂಸ್
ಉಡುಪಿ: ಅಜ್ಜರಕಾಡು ಪಾರ್ಕ್ ರೆಸಿಡೆನ್ಸಿಯಲ್ಲಿರುವ ಮುನಿಯಾಲ್ ಆಯುರ್ವೇದ ಕುಟುಂಬ ಚಿಕಿತ್ಸಾಲಯದಲ್ಲಿ ಮಾ.4ರಂದು ಬೆಳಿಗ್ಗೆ 9ರಿಂದ ಸಂಜೆ 6.30ರ ವರೆಗೆ ಮೂತ್ರಪಿಂಡದ ರೋಗ ಮತ್ತು ಸಂಬಂಧಿತ ಸಮಸ್ಯೆಗಳಾದ ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರಕೋಶದಲ್ಲಿ ಕಲ್ಲು, ನೋವು ಅಥವಾ ಅಸಂಯಮ ಮೂತ್ರ ವಿಸರ್ಜನೆ ಇತ್ಯಾದಿಗಳಿಗೆ ತಜ್ಞ ವೈದ್ಯರಿಂದ ವಿಶೇಷ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಹಾಗೂ ಆರೋಗ್ಯ ರಕ್ಷಣೆಗೆ ಸೂಕ್ತವಾದ ಆಯುರ್ವೇದ ರೀತಿಯ ಆಹಾರ ವಿಹಾರಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಮಾಹಿತಿಗಾಗಿ 8947032291 ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.