.jpg)
ಧರ್ಮ ಜೀವನ ರಕ್ಷಕಳು ದೇವಿ
Saturday, March 1, 2025
ಲೋಕಬಂಧು ನ್ಯೂಸ್
ಕಾಪು:ಬದುಕಿನ ವಾಸ್ತವ ಆಸೆಗೆ ಚ್ಯುತಿ ಬಾರದಂತೆ ಬದುಕುವುದೇ ಧರ್ಮ. ಅದನ್ನು ಕಾಪಾಡುವುದು ದೈವ, ದೇವರು. ಧರ್ಮದ ರಕ್ಷಣೆ ಜೊತೆಗೆ ಜನಜೀವನಕ್ಕೆ ಮಾರಕವಾಗುವ ಮಹಾಮಾರಿಯಂಥ ಪಿಡುಗು ಹೋಗಲಾಡಿಸುವ ಶಕ್ತಿ ಕಾಪು ಮಾರಿಯಮ್ಮನಿಗೆ ಇದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುವಾರ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ದಾನಿ ಕರುಣಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಉಮಾನಾಥ ಕೋಟ್ಯಾನ್, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಶಶಿಧರ್ ಶೆಟ್ಟಿ ಮಸ್ಕತ್, ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕಾಪು ಪುರಸಭೆ ಉಪಾಧ್ಯಕ್ಷೆ ಸರಿತಾ ಶಿವಾನಂದ, ಮುಖ್ಯಾಧಿಕಾರಿ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಶೇಖರ್ ಸಾಲ್ಯಾನ್, ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.
ಕಾಪು ದಿವಾಕರ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕ್ಕಳ ಮುಂಬೈ ಹಾಗೂ ದಾಮೋದರ್ ಶರ್ಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಧೂರು ಬಾಲಸುಬ್ರಹ್ಮಣ್ಯಂ ಬಳಗದವರಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತ, ಶ್ರೀ ಲದೇವಿ ನೃತ್ಯಾರಾಧನಾ ಕಲಾ ಕೇಂದ್ರದ ವಿದುಷಿ ರೋಹಿಣಿ ಉದಯ್ ಬಳಗದವರಿಂದ ನೃತ್ಯ ವೈಭವ, ವಿಜಯಕುಮಾರ್ ಕೊಡಿಯಾಲ್'ಬೈಲ್ ಬಳಗದವರಿಂದ 'ಶಿವದೂತೆ ಗುಳಿಗೆ' ನಾಟಕ ಪ್ರದರ್ಶನಗೊಂಡಿತು.