.jpg)
ಶ್ರೀವಿದ್ಯಾ ಪೂರ್ಣಮಾನ ತ್ರಿಕಾಲ ಚಕ್ರೇಶ್ವರಿ ಮಹಾಪೂಜೆ ಸಂಪನ್ನ
Saturday, March 1, 2025
ಲೋಕಬಂಧು ನ್ಯೂಸ್
ಕಾಪು: ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನಃಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ನಾಲ್ಕನೇ ದಿನವಾದ ಶುಕ್ರವಾರ ಋತ್ವಿಜರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆದಿದ್ದು, ಪ್ರಧಾನ ತಂತ್ರಿ ಕೆ.ಪಿ.ಕುಮಾರಗುರು ತಂತ್ರಿ ಮತ್ತು ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ನೇತೃತ್ವದಲ್ಲಿ ಋತ್ವಿಜರಿಂದ ಶ್ರೀವಿದ್ಯಾ ಪೂರ್ಣಮಾನ ತ್ರಿಕಾಲ ಶ್ರೀ ಚಕ್ರೇಶ್ವರಿ ಮಹಾಪೂಜೆ ನೆರವೇರಿತು.
ಕ್ಷೇತ್ರದಲ್ಲಿ ಕ್ಷಿಪ್ರಪ್ರಸಾದ ಮಂತ್ರಹೋಮ, ಭದ್ರಕಾಳಿ ಕೇಶೀಸೂಕ್ತ ಹೋಮ, ಸೌಂದರ್ಯಲಹರಿ ಯಾಗ, ಮಹಾಲಕ್ಷ್ಮೀಪ್ರದ ಚಂಡಿಕಾ ಸಕ್ಷೀರ ಕಮಲಪುಷ್ಪಯಾಗ, ಖಡ್ಗಮಾಲಾಮಂತ್ರಶಕ್ತಿಯಾಗ, ಪಂಚದಶತಿಥಿನಿತ್ಯಾಮಾತೃಕಾರಾಧನಮ್, ಪದ್ಮಾವತೀಪದ್ಮಾರ್ಚನಾಸಪರ್ಯಾ, ಶ್ರೀಮಾರೀದೇವ್ಯಂಗ ಪ್ರಾಯಶ್ಚಿತಯಾಗ, ಶ್ರೀ ಸೂಕ್ತಯಾಗ, ಷಟ್'ಚಕ್ರಮಂಡಲಪೂಜೆ, ಪೂರ್ಣಮಾನ ತ್ರಿಕಾಲ ಶ್ರೀ ಚಕ್ರೇಶ್ವರಿ ಮಹಾಪೂಜೆ, ಲತಾಲಿಂಗತೋಭದ್ರಮಂಡಲ ಪೂಜೆ, ಚಕ್ರಾಬ್ಜಮಂಡಲ ಪೂಜೆ, ಶ್ರೀ ಜಲದುರ್ಗಾದೇವಿ ದೀಪನಮಸ್ಕಾರ, ಸರ್ವಾಪನ್ನಿವೃತ್ತಿಕರ ಚಂಡೀಪುರಶ್ಚರಣವಿಧಿ, ಸಾನ್ನಿಧ್ಯಾಭಿವೃದ್ಧಿಕರ ಕರ್ಮಾಂಗಗಳು ಸಂಪನ್ನಗೊಂಡಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮೂಳೂರು ಸುಧಾಕರ್ ಹೆಗ್ಡೆ, ರವಿ ಸುಂದರ್ ಶೆಟ್ಟಿ, ಅನಿಲ್ ಬಲ್ಲಾಳ್, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್.ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಗಂಗಾಧರ ಸುವರ್ಣ, ಮನೋಹರ್ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಉದಯ್ ಸುಂದರ್ ಶೆಟ್ಟಿ, ಭಗವಾನ್‌ದಾಸ್ ಶೆಟ್ಟಿಗಾರ್, ಯೋಗೀಶ್ ವಿ. ಶೆಟ್ಟಿ ಮತ್ತು ರಮೇಶ್ ಹೆಗ್ಡೆ, ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ ಮೊದಲಾದವರಿದ್ದರು.