-->
ಏ.12ರಂದು ಸ್ಥಾಪನಾ ದಿನಾಚರಣೆ

ಏ.12ರಂದು ಸ್ಥಾಪನಾ ದಿನಾಚರಣೆ

ಲೋಕಬಂಧು ನ್ಯೂಸ್
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಸಂಘದ ಸ್ಥಾಪನಾ ದಿನಾಚರಣೆ ಏಪ್ರಿಲ್ 12ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕಾರ್ಟೂನಿಸ್ಟ್ ಹಾಗೂ ಹಿರಿಯ ಬಹರಗಾರ ಪಂಜು ಗಂಗೊಳ್ಳಿ ಉದ್ಘಾಟಿಸಲಿದ್ದು, ವಿಶ್ರಾಂತ ಪತ್ರಕರ್ತ ಮೋಹನ್ ಚಂದ್ರ ನಂಬಿಯಾರ್ ಸಂಘದ ಕುರಿತು ಮಾತನಾಡುವರು.


ಸ್ಥಾಪನಾ ದಿನದ ಗೌರವವನ್ನು ಸಂಘದ ಸ್ಥಾಪಕ ಸದಸ್ಯ, ಹಿರಿಯ ಪತ್ರಕರ್ತ ಡಾ.ಸುಧಾಕರ ನಂಬಿಯಾರ್ ಅವರಿಗೆ ನೀಡಲಾಗುವುದು.


ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಲಿರುವರು ಎಂದು ಕಾರ್ಯದರ್ಶಿ ನಝೀರ್ ಪೊಲ್ಯ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article