-->
ಪುತ್ತಿಗೆ ಮೂಲ ಮಠದಲ್ಲಿ ಮಹಾಭಿಷೇಕ

ಪುತ್ತಿಗೆ ಮೂಲ ಮಠದಲ್ಲಿ ಮಹಾಭಿಷೇಕ

ಲೋಕಬಂಧು ನ್ಯೂಸ್, ಉಡುಪಿ
ಹಿರಿಯಡಕ ಸ್ವರ್ಣಾ ನದಿ ತೀರದಲ್ಲಿರುವ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಮಹಾಭಿಷೇಕ ಶುಕ್ರವಾರ ನಡೆಯಿತು.
ಶ್ರೀರಾಮ, ನರಸಿಂಹ ದೇವರ ಸಹಿತ ಮಠದ ಸಂಸ್ಥಾನ ದೇವರಿಗೆ ವಿವಿಧ ಮಂಗಳ ದ್ರವ್ಯವನ್ನೊಳಗೊಂಡಂತೆ ಪಂಚಾಮೃತ ಅಭಿಷೇಕ ಹಾಗೂ ಸೀಯಾಳ ಅಭಿಷೇಕ ಮಾಡಲಾಯಿತು. ವಿಶೇಷ ಅಲಂಕಾರ ಮಾಡಿ ಮಹಾಪೂಜೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮನ್ಯುಸೂಕ್ತ ಹೋಮದ ಮಂಡಲ ಪೂಜೆ ಮಾಡಿ, ವಿವಿಧ ಮಂಗಳ ದ್ರವ್ಯಗಳನ್ನು ಅರ್ಪಿಸಿ ಹೋಮದ ಮಹಾಪೂಜೆ ಹಾಗೂ ಪೂರ್ಣಾಹುತಿ ನಡೆಸಲಾಯಿತು.


ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ನೇತೃತ್ವದಲ್ಲಿ ನಡೆಯಿತು.

Ads on article

Advertise in articles 1

advertising articles 2

Advertise under the article